Tuesday, February 1, 2011

ಪರೀಕ್ಷೆ ಬರೆದ ಸಂಸದ, ಸಚಿವರು, ಶಾಸಕರು


         ಮುಚಖಂಡಿ ಗ್ರಾಮದಲ್ಲಿ ನಡೆದ ಬಿಜೆಪಿ ಜಿಲ್ಲಾ ಅಭ್ಯಾಸ ವರ್ಗದಲ್ಲಿ ಪರೀಕ್ಷೆ ಬರೆಯುತ್ತಿರುವ ಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಶಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ.





                                               ಪರೀಕ್ಷೆ  ಬರೆದ  ಸಂಸದ, ಸಚಿವರು, ಶಾಸಕರು


ಬಾಗಲಕೋಟೆ 29- ಪಕ್ಷದ ಪ್ರಥಮ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಭಾರತೀಯ ಜನ ಸಂಘದ ಸಂಸ್ಥಾಪಕರು ಯಾರು..?, ಕನರ್ಾಟಕ ರಾಜ್ಯದ ಅಧ್ಯಕ್ಷರು ಯಾರು..?, ಜಿಲ್ಲಾ ಪದಾಧಿಕಾರಿಗಳಲ್ಲಿ 5 ಜನರನ್ನು ಹೆಸರಿಸಿ..?, ಬಾಗಲಕೋಟೆ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು..?
ಈ ಪ್ರಶ್ನೆಗಳು ಉದ್ಭವಿಸಿದ್ದು ಎಲ್ಲಿ ಎಂದು ಯೋಚಿಸುತ್ತಿದ್ದೀರಾ..., ಅತ್ಯಂತ ಕಟ್ಟು ನಿಟ್ಟು, ಶಿಸ್ತು ಬದ್ಧ ಪರೀಕ್ಷೆ, ಅರ್ಧ ಗಂಟೆ ಕಾಲಾವಕಾಶ, ಎರಡು ವಿಷಯಗಳು, ಸುಲಭವಾಗಿ ಉತ್ತರಿಸಬಲ್ಲ ಪ್ರಶ್ನೆಗಳು ಅದಕ್ಕೆ ಉತ್ತರಿಸುವ ಅಭ್ಯಥರ್ಿಗಳು ಸಂಸದ, ಸಚಿವರು, ಶಾಸಕರು, ಜಿ.ಪಂ ಸದಸ್ಯರು ಹಾಗೂ ಜಿಲ್ಲಾ ಪದಾಧಿಕಾರಿಗಳು. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಸ್ಪೇಶಲ್ ಸ್ಕ್ವಾಡ್ ಆಗಿದ್ದರು.
ಭಾರತೀಯ ಜನತಾ ಪಕ್ಷ ಜಿಲ್ಲಾ ಘಟಕ ಮುಚಖಂಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಜಿಲ್ಲಾ ಅಭ್ಯಾಸ ವರ್ಗದ ಸಮಾರೋಪ ಸಮಾರಂಭಕ್ಕೂ ಮುನ್ನ ಈ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು, ನಮ್ಮ ಬಿಜೆಪಿ ನಮಗೆಷ್ಟು ಗೊತ್ತು ಹಾಗೂ ಸಕರ್ಾರ ಯೋಜನೆಗಳ ಫಲಾನುಭವಿಗಳು ಯಾರು ಹಾಗೂ ಮೊತ್ತ ಎಷ್ಟು, ಈ ಎರಡು ವಿಷಯಗಳ ಮೇಲೆ ಪರೀಕ್ಷೆ ಏರ್ಪಡಿಸಲಾಗಿತ್ತು. ಜಿಲ್ಲಾ ಸಂಘಟನಾ ಕಾರ್ಯದಶರ್ಿ ರವೀಶ, ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಾವಲಗಿ ಹಾಗೂ ಅಭ್ಯಾಸ ವರ್ಗದ ಪ್ರಮುಖ ಜಯಂತ ಕುರಂದವಾಡ ನಿಯಂತ್ರಕರಾಗಿದ್ದರೆ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಸ್ಪೇಶಲ್ ಸ್ಕ್ವಾಡ ಆಗಿ ಆಗಮಿಸಿದ್ದರು.
ಸಚಿವ ಗೋವಿಂದ ಕಾರಜೋಳ, ಕನರ್ಾಟಕ ವಿದ್ಯುತ್ ಮಗ್ಗಗಳ ನಿಗಮದ ಅಧ್ಯಕ್ಷ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕಣರ್ಿ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಎಸ್.ನ್ಯಾಮಗೌಡ, ಮಾಜಿ ಶಾಸಕ ರಾಜಶೇಖರ ಶೀಲವಂತ ಜಿ.ಪಂ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲ ಮಂಡಲಗಳ ಪದಾಧಿಕಾರಿಗಳು ಅಭ್ಯಥರ್ಿಗಳಾಗಿದ್ದು ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ನಡೆಸಲಾಗಿತ್ತು.
ಭಾರತೀಯ ಜನಸಂಘದ ಸಂಸ್ಥಾಪಕ ಯಾರು..?, ಭಾರತೀಯ ಜನತಾ ಪಕ್ಷದ ಮೊದಲ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯರಾಗಿ ನಾವು ಪ್ರತಿಜ್ಞಾ ಬದ್ಧರಾದ ಪಂಚ ನಿಷ್ಠೆಗಳು ಯಾವುವು..?, ವಂದೇ ಮಾತರಂ ರಣ ಮಂತ್ರ ಬರೆದ ಕವಿ ಯಾರು...?, ಈಗಿನ ರಾಷ್ಟ್ರೀಯ ಅಧ್ಯಕ್ಷರು ಯಾರು..?, ಕನರ್ಾಟಕ ರಾಜ್ಯದ ಅಧ್ಯಕ್ಷರು ಯಾರು..?, ಬಿಜೆಪಿ ಸಕರ್ಾರ ಯಾವ ಯಾವ ರಾಜ್ಯಗಳಲ್ಲಿದೆ..?, 4 ರಾಷ್ಟ್ರೀಯ ಪದಾಧಿಕಾರಿಗಳ ಹೆಸರು ಬರೆಯಿರಿ..?, 6 ರಾಜ್ಯ ಪದಾಧಿಕಾರಿಗಳ ಹೆಸರು ಬರೆಯಿರಿ..?, ಬಾಗಲಕೋಟೆ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎಷ್ಟು...? ಈ ರೀತಿಯ ಹಲವು ಪ್ರಶ್ನೆಗಳು ನಮ್ಮ ಬಿಜೆಪಿ ನಮಗೆಷ್ಟು ಗೊತ್ತು ವಿಷಯದಲ್ಲಾದರೆ ಕೆಳಗೆ ನಮೂದಿಸಿದ ಯೋಜನೆಗಳ ಫಲಾನುಭವಿಗಳು ಯಾರು ಹಾಗೂ ಎಷ್ಟು ಹಣ ಸಿಗುವುದು ಎನ್ನುವ ವಿಷಯದಲ್ಲಿ ವಿವಿಧ ಯೋಜನೆಗಳ ಹೆಸರು ನೀಡಿ ಅದರ ಮುಂದೆ ಖಾಲಿ ಇರುವ ಜಾಗೆಯಲ್ಲಿ ಫಲಾನುಭವಿಗಳು ಹಾಗೂ ಎಷ್ಟು ಹಣ ನೀಡಲಾಗುತ್ತಿದೆ ಎಂದು ಬರೆಯಬೇಕಾಗಿತ್ತು.
ಈ ಪರೀಕ್ಷೆ ಅಭ್ಯಾಸ ವರ್ಗದ ವಿಶೇಷವಾದರೆ ಒಟ್ಟಾರೆ ಅಬ್ಯಾಸ ವರ್ಗ ಸಂಘಟನಾತ್ಮಕ ಬೆಳವಣಿಗೆಯ ಕುರಿತು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸಂಘಟನಾ ಕಾರ್ಯದಶರ್ಿ ಸಂತೋಷಜಿ ಮಾತನಾಡಿದರು. ಸಂಸದ ಪಿ.ಸಿ.ಗದ್ದಿಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕನರ್ಾಟಕ ವಿದ್ಯುತ್ ಮಗ್ಗಗಳ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಶ್ರೀಕಾಂತ ಕುಲಕಣರ್ಿ, ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜೆ.ಎಸ್.ನ್ಯಾಮಗೌಡ, ಮಾಜಿ ಶಾಸಕ ರಾಜಶೇಖರ ಶೀಲವಂತ, ಜಿ.ಪಂ ಸದಸ್ಯ ಹಣಮಂತ ನಿರಾಣಿ,  ಬಿಟಿಡಿಎ ಸಭಾಪತಿ ಲಿಂಗರಾಜ ವಾಲಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಥಕ್ ನೃತ್ಯ ಖ್ಯಾತಿಯ ಶರ್ವರಿ ಜೆಮಿನಿಸ್ ನೃತ್ಯ


                                                   ಕಥಕ್ ನೃತ್ಯ ಖ್ಯಾತಿಯ ಶರ್ವರಿ ಜೆಮಿನಿಸ್ ನೃತ್ಯ 

  ಬಾಗಲಕೋಟೆ : ಹೆಜ್ಜೆ ಗೆಜ್ಜೆ ನಾದದ ವಿಶೇಷತೆ ಹೊಂದಿರುವ ನೃತ್ಯ ಪ್ರದರ್ಶನದಲ್ಲಿ ಹೆಜ್ಜೆ ಗೆಜ್ಜೆಗಳ ನಾದ ಮೊಳಗಿದಂತೆ ಕರತಾಡನದ ಅಬ್ಬರ ಶತಾಬ್ದಿ ಭವನವನ್ನು ಅಲಂಕರಿಸಿತ್ತು, ಗೋವರ್ಧನ ಗಿರಿಯ ಕಥೆಯ ವಿಶ್ಲೇಷಣೆ ನೃತ್ಯದಲ್ಲಿ ಮೂಡಿಬಂದು ಗೋವರ್ಧನ ಉದ್ದಾರವಾದ ಪ್ರಸಂಗ ವೀಕ್ಷಕರ ಮನಃಸೆಳೆಯಿತು.
ತಿಳಿಬೆಳದಿಂಗಳ ಮಧ್ಯೆ ಬಿ.ವ್ಹಿ.ವ್ಹಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಅಮೆರಿಕ ಖ್ಯಾತಿಯ ಸ್ವರಾಂಜಲಿ ತಂಡದ ಶರ್ವರಿ ಜೆಮಿನಿಸ್ ಕಥಕ್ ನೃತ್ಯ ಪ್ರದಶರ್ಿಸಿದ ಪರಿ ವೀಕ್ಷಕರಿಗೆ ಕಲೆಯ ರಸದೌತನ ಉಣ ಬಡಿಸಿತು.
ಆದಿಶಂಕರಾಚಾರ್ಯ ರಚಿತ ನಾರಿ ನಟೇಶ್ವರ ಸ್ತೋತ್ರದ ನೃತ್ಯದೊಂದಿಗೆ ಆರಂಭವಾದ ಕಥಕ್ ನೃತ್ಯ ಪ್ರದರ್ಶನ ಥಟ್ ಎಂಬ ತಾಳ ಪ್ರದರ್ಶನ ಶರ್ವರಿ ಜೆಮಿನಸ್ ತಬಲಾ ಹಾಗೂ ಹಾಮರ್ೋನಿಯಂ ತಾಳಕ್ಕೆ ತಮ್ಮ ಹೆಜ್ಜೆ ಗೆಜ್ಜೆಯ ನಾದ ಮೊಳಗಿಸಿದರು. ಸ್ತ್ರೀ ಸಶಕ್ತಳು ಎಂಬ ಸಂದೇಶ ಸಾರುವ ಮಾತೆ ಕಾಳಿಯ ನೃತ್ಯ ಖಂಡಜಾತಿಯ ಕಾಳಿಪರನ್ ನೃತ್ಯ ಪ್ರದಶರ್ಿಸಿ ಜಯತು ಜಯ ಮಾ ದುಗರ್ೆ ಎಂಬ ಹಿನ್ನಲೆ ಗಾಯನದಲ್ಲಿ ಈ ನೃತ್ಯ ರೂಪಪಡೆದುಕೊಂಡು ಜನರ ಮನತಟ್ಟಿತು. ನಿಖಿಲ್ ಪಾಠಕ್ (ತಬಲಾ), ಸಾರಂಗ ಕುಲಕಣರ್ಿ (ಹಾಮರ್ೋನಿಯಂ), ಶ್ರೀಮತಿ ವೃಣ್ಮಯಿ ಪಾಠಕ್ ಅವರ ಹಿನ್ನಲೆ ಗಾಯನದೊಂದಿಗೆ ಶರ್ವರಿ ಜೆಮಿನಸ್ ಕಥಕ್ ನೃತ್ಯ ಪ್ರದಶರ್ಿಸಿದರು.
ಗೋವರ್ಧನ ಉದ್ದಾರ ಕಥೆಯ ಸಾರಂಶವನ್ನು ನೃತ್ಯದಲ್ಲಿ ಪ್ರದಶರ್ಿಸಿ ಕಥೆಯ ವಿಶ್ಲೇಷಣೆಯನ್ನು ನಿರೂಪಿಸಿದರು.ನೃತ್ಯದೂದ್ದಕ್ಕೂ ಪ್ರತಿಯೊಂದು ಹಂತದಲ್ಲಿ ಆ ನೃತ್ಯದ ವಿಶೇಷತೆಯನ್ನು ವಿವರಿಸುತ್ತ ನೃತ್ಯ ಪ್ರದಶರ್ಿಸಿದ ಶರ್ವರಿ ಜೆಮಿನಿಸ್ ಭಾರತದಲ್ಲಿ ಭಾರತೀಯ ಸಂಸ್ಕೃತಿ ಕೆಳಗುಂದುತ್ತಿದ್ದು ಅದನ್ನು ಎತ್ತಿ ಹಿಡಿದು ಜಗತ್ತಿಕ್ಕೆ ಸಾರಲು ಸ್ವರಾಂಜಲಿ ತಂಡ ಶ್ರಮಿಸುತ್ತಿದೆ ಎಂದು ಹೇಳಿ ಒಂದು ಕಥೆಯನ್ನು ನೃತ್ಯದಲ್ಲಿ ನಿರೂಪಿಸುವುದೇ ಕಥಕ್ ನೃತ್ಯ, ಅದು ಹೆಜ್ಜೆ ಗೆಜ್ಜೆಗಳ ವೈಶಿಷ್ಠ್ಯತೆಯನ್ನು ಹೊಂದಿದೆ ಎಂದರು.
ಕಾರ್ಯಕ್ರಮವನ್ನು ಬಿ.ವ್ಹಿ.ವ್ಹಿ ಸಂಘದ ಗ್ವವರ ಕಾರ್ಯದಶರ್ಿ ವೀರಣ್ಣ ಹಲಕುಕರ್ಿ ಉದ್ಘಾಟಿಸಿದರು. ಸ್ವರಾಂಜಲಿ ತಂಡದ ಮುಖ್ಯಸ್ಥ ಬಿಜಾಪೂರ ಮೂಲದ ಶಿವುಕುಮಾರ ಹಿರೇಮಠ ಈ ಸಂದರ್ಭದಲ್ಲಿ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಹೊರದೇಶದ ಜನರಲ್ಲಿ ಮೆಚ್ಚುಗೆ ಮೂಡಿಸಿ ಸಂಸ್ಕೃತಿಯ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುವ ಕೆಲಸವನ್ನು ಸ್ವರಾಂಜಲಿ ತಂಡದ ಮೂಲಕ ಮಾಡಲಾಗುತ್ತಿದ್ದು ಅಮೆರಿಕ ಸೇರಿದಂತೆ ಯೂರೋಪ್ ದೇಶಗಳಲ್ಲಿ ನೃತ್ಯ ಪ್ರದರ್ಶನಗೊಂಡಿದೆ ಎಂದು ಹೇಳಿದರು.
ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಸಿ.ಎಸ್.ಪಾಟೀಲ ಸ್ವಾಗತಿಸಿದರು. ಡಾ.ಅಶೋಕ ಮಲ್ಲಾಪೂರ ಪರಿಚಯಿಸಿದರು. ಡಾ.ಶಿವು ಸೋಲಬಣ್ಣವರ ವಂದಿಸಿದರು. ತೋಟಗಾರಿಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ಬಿ.ದಂಡಿನ್, ಬಿ.ವ್ಹಿ.ವ್ಹಿ ಸಂಘದ ಆಡಳಿತಾಧಿಕಾರಿ ಎನ್.ಜಿ.ಕರೂರ, ಡೀನ್ ಪ್ರಕಾಶಪ್ಪ, ಸದಸ್ಯರು ಸೇರಿದಂತೆ ನಗರಸಭೆ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಭಜಂತ್ರಿ, ಸದಸ್ಯರಾದ ರೇಖಾ ಹುಲುಗಬಾಳಿ, ಭಾಗ್ಯಶ್ರೀ ಹಂಡಿ ಮತ್ತಿತರರು ಉಪಸ್ಥಿತರಿದ್ದರು.

ಲಕ್ಕಿ ನಂಬರ್ 11 ರ ಮಗು.


                                       ಲಕ್ಕಿ ನಂಬರ್ 11 ರ ಮಗು.

ಬಾಗಲಕೋಟೆ : ಮಂಗಳವಾರ ಜನಿಸಿದ ಮಗುವಿಗೆ ಎಲ್ಲವೂ ಹನ್ನೊಂದು ಮಯ, ದಿ.11 ರ 2011 ರಂದು 11 ಗಂಟೆ, 11 ನಿಮಿಷ, 11 ಸೆಕೆಂಡ್ ಗೆ ಈ ಮಗು ಜನಿಸಿದೆ. ಅದು ಮಗುವಿನ ಲಕ್ಕಿ ನಂಬರ್ ಎಂಬುದು ಪಾಲಕರ ನಿರೀಕ್ಷೆ ಮತ್ತು ಆಶಯ.
ಕೆಲವರಿಗೆ 11 ಅಂಕಿ ಲಕ್ಕಿ ನಂಬರ್ ಆದರೆ ಈ ಮಗು ಧರೆಗಿಳಿಯುತ್ತಿದ್ದಂತೆ 11 ಅಂಕಿ ಲಕ್ಕಿ ನಂಬರ್ ಆಗಿದೆ, ತಾಲೂಕ ಪಂಚಾಯತ ಮಾಜಿ ಸದಸ್ಯೆ ಶ್ರೀಮತಿ ನೀಲಮ್ಮ ಶೇಖರಯ್ಯ ಹಿರೇಮಠ ಅವರ ಮೊಮ್ಮಗು ಧರೆಗಿಳಿದಿದ್ದು 11-1-11, 11;11;11 ಕ್ಕೆ, ಶತಮಾನದ ನಂತರವೇ ಆಗಮಿಸುವ ಈ ಸಮಯಕ್ಕೆ ನೀಲಮ್ಮನವರ ಮಗ ವೆಂಕಟೇಶ ಅವರ ಪತ್ನಿ ಕಲಾವತಿಯವರಿಗೆ ಹುಟ್ಟಿದ ಮಗು ದಿನಾಂಕ, ಇಸ್ವಿ ಹಾಗೂ ಸಮಯ ಎಲ್ಲವೂ 11 ಮಯವಾಗಿದ್ದು ಇದು ಆ ಮಗುವಿನ ಲಕ್ಕಿ ನಂಬರ್ ಎಂಬುದು ವೆಂಕಟೇಶ ಹಾಗೂ ಕಲಾವತಿಯವರ ನಂಬಿಕೆ.
ಡಾ.ಶೇಖರ ಮಾನೆ ಯವರ ಆಸ್ಪತ್ರೆಯಲ್ಲಿ ಸರಿಯಾಗಿ ಈ ಸಮಯಕ್ಕೆ ಜನ್ಮತೆಳೆದ ಮಗು ಆರೋಗ್ಯಕರವಾಗಿದ್ದು ಅಜ್ಜ ಶೇಖರಯ್ಯ ಹಿರೇಮಠ ಅವರ ಚೊಚ್ಚಲ ಮೊಮ್ಮಗು ಇದಾಗಿದ್ದು ಕೆಲವರು ಬೇಕುಅಂತಲೆ ಈ ಸಮಯಕ್ಕೆ ಪ್ರಸೂತಿ ಮಾಡಿಸಿಕೊಂಡರು ಸಿಗದ ಈ ಭಾಗ್ಯ ಸಾಮಾನ್ಯ ಹೆರಿಗೆಯಲ್ಲಿ ನಮ್ಮ ಮೊಮ್ಮಗೂವಿಗೆ ಈ ಭಾಗ್ಯ ಸಿಕ್ಕಿದೆ ಎಂದು ಹರ್ಷದಿಂದ ಹೇಳುತ್ತಾರೆ.

ಭಾಸ್ಕರ ಮನಗೂಳಿ

ಬಾಗಲಕೋಟೆಯ ಬೆಳುಕು ಪಂ.ಭೀಮಸೇನ ಜೋಶಿ


                 ಬಾಗಲಕೋಟೆಯ ಸಂಗೀತ ಕಲಾವಿದರೊಂದಿಗೆ ಪಂಡಿತ ಡಾ.ಭೀಮಸೇನ ಜೋಶಿ. ಗಾಯಕ ಅನಂತ ಕುಲಕಣರ್ಿ, ಕಲಾವಿದ ರಾವಸಾಹೇಬ ಮೋಹರೆ, ಕೇಶವ ಜೋಶಿ ಮತ್ತಿತರರು ಚಿತ್ರದಲ್ಲಿದ್ದಾರೆ.

            ಬಾಗಲಕೋಟೆಯ ಬೆಳುಕು ಪಂ.ಭೀಮಸೇನ ಜೋಶಿ

ಬಾಗಲಕೋಟೆ ; ಭಾರತ ರತ್ನ, ಗಾನ ಗಂಧರ್ವ, ಪದ್ಮಶ್ರೀ, ಪದ್ಮವಿಭೂಷಣೆ, ಸಂಗೀತ ಸಾರ್ವಭೌಮ, ಕನಾಟಕ ರತ್ನ ಹೀಗೆ 200 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿ ಸಂಗೀತ ಕ್ಷೇತ್ರದ ದಿಗ್ಗಜ, ಸ್ವರ ಸಾಮ್ರಾಟ, ಶೃತಿ, ಲಯ, ತಾಲದ ಅಧಿಪತಿಯಾಗಿದ್ದ ಡಾ.ಪಂಡಿತ ಭೀಮಸೇನ ಜೋಶಿ ಬಾಗಲಕೋಟೆಯ ಶಿಷ್ಯರು, ಅವರ ಜೈತ್ರ ಯಾತ್ರೆಗೆ ಮುನ್ನುಡಿ ಬರೆದಿದ್ದೆ ಬಾಗಲಕೋಟೆ, ಅವರ ಬಾಳಿನ ಪ್ರಮುಖ ಬದಲಾವಣೆಯಾಗಿದ್ದು ಸಹ ಬಾಗಲಕೋಟೆಯಲ್ಲಿ. ಹೀಗಾಗಿ ಅವರು ಬಾಗಲಕೋಟೆಯ ಬೆಳುಕು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆಯ ಸಂಗಾತಿಗಳೆಲ್ಲ ತಮ್ಮ ಮಿತ್ರನನ್ನು ಕಳೆದುಕೊಂಡ ದುಖಃ ಎಲ್ಲ ಮನೆಯಲ್ಲಿಯೂ ಬೀಡು ಬಿಟ್ಟಿದೆ. ಪಂ. ಭೀಮಸೇನ ಜೋಶಿ ವಾಸಿಸುತ್ತಿದ್ದ ಮನೆಯ ಜಂತಿಯೂ ಸಹ ಕಂಬನಿ ಮಿಡಿಯುತ್ತಿದೆ, ಏಕಲವ್ಯ ಧ್ರೋಣಾಚಾರ್ಯರ ಮಧ್ಯೆ ಇದ್ದ ಗುರು-ಶಷ್ಯ ಸಂಬಂಧ ಬಾಗಲಕೋಟೆಯ ಕೆಲವು ಗಾಯಕರು ಪಂ.ಭೀಮಸೇನ ಜೋಶಿಯವರನ್ನು ಗುರು ಎಂದು ಭಾವಿಸುವವರೆಲ್ಲರೂ ಸೇರಿದಂತೆ ಬಾಗಲಕೋಟೆಯ ಅನೇಕ ಮನೆತನಗಳಲ್ಲಿಯೂ ಸಹ ದುಖಃ ಆವರಿಸಿದೆ.
ಪಂ.ಭೀಮಸೇನ ಜೋಶಿಯವರ ಬಾಲ್ಯಾವಸ್ಥೆಯಿಂದಲೇ ಬಾಗಲಕೋಟೆಗೆ ಅವರು ಚಿರಪರಿಚಿತರು, ಖ್ಯಾತ ಗಾಯಕರಾಗಿದ್ದ ಬಾಗಲಕೋಟೆಯ ಪಂ.ಶ್ಯಾಮಾಚಾರ್ಯ ಜೋಶಿ ಇವರ ಆಪ್ತ ಗುರುಗಳಲ್ಲಿ ಒಬ್ಬರಾಗಿದ್ದರು, ದಾಸ ಸಾಹಿತ್ಯದ ರಸದೌತನವನ್ನು ಪಂ.ಭೀಮಸೇನ ಜೋಶಿಯವರಿಗೆ ಉಣಬಡಿಸಿದವರು ಪಂ.ಶ್ಯಾಮಾಚಾರ್ಯ ಜೋಶಿ, ಅನೇಕ ಕಾರ್ಯಕ್ರಮಗಳಲ್ಲಿ ಸ್ವತಃ ಪಂ.ಭೀಮಸೇನ ಜೋಶಿಯವರು ಶಿರಶಾಷ್ಟಾಂಗ ನಮಾಸ್ಕಾರ ಹಾಕಿ ಕೃತಾರ್ಥ ಭಾವನೆಯನ್ನು ವ್ಯಕ್ತಪಡಿಸಿರುವ ನಿದರ್ಶನಗಳು ಇವೆ.
ಕನ್ನಡ ಶುಭೋದಯದ ಆಚಾರ್ಯರು ಎಂದೇ ಖ್ಯಾತರಾಗಿರುವ ಪಂ.ವಾಸುದೇವಾಚಾರ್ಯ ಕೆರೂರ ಅವರ ವಾಸುದೇವ ವಿನೋದಿನಿ ನಾಟ್ಯಸಭಾದ ಅತ್ಯಂತ ಜನಪ್ರೀಯ ನಾಟಕ "ನಲದಮಯಂತಿ" ನಾಟಕದಲ್ಲಿಯೂ ಸಹ ಇವರು ಪಾತ್ರವಹಿಸಿದ್ದರು. ಬಾಗಲಕೋಟೆ ಕಿಲ್ಲೆಯಲ್ಲಿರುವ ಶ್ರೀನಿವಾಸರಾವ್ ಪರ್ವತಿಕರ ಅವರ ಮನೆಯಲ್ಲಿಯೇ 3-4 ತಿಂಗಳಕಾಲ ವಾಸವಾಗಿದ್ದು ನಲದಮಯಂತಿ ನಾಟಕದ ರಂಗ ತಾಲೀಮು ಮಾಡಿ ಪಾಂಡುರಂಗ ಮಂಗಳವೇಡೆ, ಶ್ರೀನಿವಾಸರಾವ್ ಪರ್ವತಿಕರ, ನರಸಿಂಹಾಚಾರ್ಯ ಮಳಗಿ, ಶ್ರೀಮತಿ ಶಾಂತಾ ಪರ್ವತಿ, ಹೆಣ್ಣಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಬಿಂದುರಾವ್ ಕುಲಕಣರ್ಿ, ನಾರಾಯಣಾಚಾರ್ಯ ಡಂಬಳ, ಟಿ.ಎ.ದೇಶಪಾಂಡೆ(ಹುಲ್ಲಕೇರಿ ದೊರೆ) ಸೇರಿದಂತೆ ಹಲವರಿಗೆ ಪಂ.ಭೀಮಸೇನ ಜೋಶಿ ಕೈಜೋಡಿಸಿದ್ದರು. ಸಂಗೀತ ನಾಟಕವಾಗಿದ್ದ ನಳದಮಯಂತಿ ನಾಟಕದಲ್ಲಿ ಏಕಕಾಲಕ್ಕೆ 42 ಗೀತೆಗಳನ್ನು ಸಾದರಪಡಿಸಿದವರು ಪಂ.ಭೀಮಸೇನ ಜೋಶಿ, ಆಗಿನ ಸಮಯದಲ್ಲೂ ಸಹ ಇವರ ಗಾಯನದಲ್ಲಿರುವ ತಪ್ಪುಗಳನ್ನು ತಿದ್ದಿದವರು ಪಂ.ಶ್ಯಾಮಾಚಾರ್ಯ ಜೋಶಿ.
ನಗರದ ಈಗಿನ ಗುರುಸಿದ್ದೇಶ್ವರ ಟಾಕೀಸ್ ಆವರಣದಲ್ಲಿ ನಳದಮಯಂತಿ ನಾಟಕವನ್ನು ಪ್ರಪ್ರಥಮಬಾರಿಗೆ ಪ್ರದರ್ಶನಗೊಂಡಾಗ ಜನಸಾಗರ ಬಸವೇಶ್ವರ ವತರ್ುಲದವರೆಗೂ ಸೇರಿತ್ತು ಎಂದು ಅವರ ಒಡನಾಡಿಗಳು ಹೇಳುತ್ತಾರೆ, ಪಂ.ಭೀಮಸೇನ ಅವರ ಬಾಳಿನ ಜೈತ್ರಯಾತ್ರೆ ಪ್ರಾರಂಬವಾಗಿದ್ದು ಈ ಸಂದರ್ಭದಲ್ಲಿಯೇ ಎಂದು ಅವರ ಓಡನಾಡಿಗಳು ಹೆಮ್ಮೆಯಿಂದ ಹೇಳುಕೊಳ್ಳುತ್ತಾರೆ. ಅತ್ಯಂತ ತೇಜಸ್ಸಿನಿಂದ ಕೂಡಿದ್ದ ಅವರ ಮುಖದಲ್ಲಿ ಸಂತೋಷ ಯಾವಾಗಲೂ ಎದ್ದು ಕಾಣಿಸುತ್ತಿತ್ತು, ತುಂಟಾಟ ಅವರ ಹವ್ಯಾಸವಾಗಿತ್ತು, ನಳದಮಯಂತಿ ನಾಟಕದಲ್ಲಿ ಹೆಣ್ಣಿನ ಪಾತ್ರ ನಿರ್ವಹಿಸಿದ ಬಿಂದುರಾವ್ ಕುಲಕಣರ್ಿ ಅವರು ಹೆಣ್ಣೋ ಗಂಡೋ ಎಂದು ಸಭೀಕರು ಕೇಳಿದಾಗ, ಸಭೀಕರನ್ನು ಗ್ರೀನ್ ಕೋಣೆಗೆ ಕರೆದುಕೊಂಡು ಹೋಗಿ ಅವರ ಕುತೂಹಲವನ್ನು ತುಂಟತನದಿಂದ ಕೊನೆಗೊಳಿಸಿದರು ಎಂದು ಅಂದಿನ ಅವರ ಓಡನಾಡಿ ಇಂದಿಗೂ ವೈದ್ಯವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಎಂ.ಜಿ.ಕೊಪ್ಪ ಅವರ ಹೇಳುತ್ತಾರೆ.
ಪಂ.ಶ್ಯಾಮಾಚಾರ್ಯ ಜೋಶಿಯವರ ಶಿಷ್ಯರಾಗಿರುವ ಡಾ.ಎಂ.ಜಿ.ಕೊಪ್ಪ ಪಂ.ಭೀಮಸೇನ ಜೋಶಿಯವರ ಆಪ್ತ ಓಡನಾಡಿಗಳಾಗಿದ್ದರು, ಕೆಲ ಕಾರ್ಯಕ್ರಮಗಳಲ್ಲಿ ಪಂ.ಭೀಮಸೇನರ ಗಾಯನಕ್ಕೆ ಇವರು ಸಾಥ್ ನೀಡಿದ್ದಾರೆ, ಬರೋಡಾ, ಕಾನಪೂರ ಮತ್ತಿತರ ಪ್ರದೇಶಗಳಲ್ಲಿ ಪಂ.ಭೀಮಸೇನರ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೋದಾಗ ಅವರನ್ನು ಗುರುತಿಸಿ  ಪ್ರವೇಶ ಪತ್ರ ನೀಡುವ ಪದ್ಧತಿ ಅವರದ್ದಾಗಿತ್ತು, ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕುತ್ತ ಮಾತನಾಡಿದ ಅವರು ಪಂ.ಭೀಮಸೇನರು ಭಾರತ ಸಂಗೀತ ಲೋಕದ ದಿಗ್ಗಜ, ಸಂಗೀತ ಕ್ಷೇತ್ರ ಶ್ರೀಮಂತವಾಗಿರುವುದಕ್ಕೆ ಪಂ.ಭೀಮಸೇನ ಜೋಶಿಯವರೇ ಕಾರಣ ಎಂದು ಹೇಳಿ ಬಾಗಲಕೋಟೆ ಅವರ ಜೈತ್ರ ಯಾತ್ರೆಯ ಮುನ್ನುಡಿಯಾಗಿತ್ತು, ಬಾಗಲಕೋಟೆಯಿಂದಲೇ ಅವರು ಪ್ರಸಿದ್ದಿ ಪಡೆದರು, ಅವರು ಉನ್ನತ ಸ್ಥಾನಕ್ಕೆ ಹೋದರೂ ಸಹ ಬಾಗಲಕೋಟೆಯನ್ನು ನೆನಪಿಸುತ್ತಿದ್ದರು ಎಂದು ಹೇಳುತ್ತಾರೆ. 1971 ರಲ್ಲಿ ಡಾ.ಜಿ.ಆರ್.ದಾತಾರ, ಸಿ.ಎನ್.ದೇಶಪಾಂಡೆ, ಪ್ರೊ.ಕೆ.ವ್ಹಿ.ಸುಬ್ಬರಾವ್ ಅವರ ನೇತೃತ್ವ ಕನರ್ಾಟಕ ಸಂಘ ಜೋಶಿಯವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ನಂತರ 1980, 94 ರವಧಿಯಲ್ಲಿ ಎರಡು ಬಾರಿ ಕಾರ್ಯಕ್ರಮಗಳು ನಡೆದಿವೆ, ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆತಾಗ ಅವರನ್ನು ನಗರಕ್ಕೆ ಬರಮಾಡಿಕೊಂಡು ಸನ್ಮಾನಿಸುವ ನ್ಯಾಯವಾದಿ ಅಚ್ಯುತ ಕೊಪ್ಪ ಅವರ ಅಲಾಪ್ ಸಂಸ್ಥೆಯ ಪ್ರಯತ್ನ ಫಲನೀಡದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಪಂ.ಪ್ರವೀಣ ಗೋಡಖಿಂಡಿ ಅವರ ಸಂಗೀತ ಕಾರ್ಯಕ್ರಮವನ್ನು ಅಭಿನಂದನಾ ಕಾರ್ಯಕ್ರಮವನ್ನಾಗಿ ಅಪರ್ಿಸಲಾಯಿತು, ಪಟ್ಟದಕಲ್ಲು ಉತ್ಸವದ ಉದ್ಘಾಟನೆಯ ಪ್ರಯತ್ನ ಕೂಡ ನಡೆದಿತ್ತು, ಆದರೆ ಆರೋಗ್ಯ ಅವರಿಗೆ ಅನುಮತಿ ನೀಡಲಿಲ್ಲ, ಏನೇ ಆಗಲಿ ಬಾಗಲಕೋಟೆ ಪಂ.ಭೀಮಸೇನ ಜೋಶಿಯವರ ಬದುಕಿಗೆ ಮಹತ್ವದ ತಿರುವು ನೀಡಿತು ಎಂಬುದು ಅವರೇ ಒಪ್ಪುವ ಮಾತು.
ನಗರದಲ್ಲಿದ್ದ ಹಂಪಿಹೋಳೆ ಮನೆತನಕ್ಕೆ ಪಂ.ಭೀಮಸೇನ ಜೋಶಿಯವರ ತಮ್ಮನ್ನನ್ನು ದತ್ತು ನೀಡಿದ್ದು ಸಹ ಇತಿಹಾಸದಲ್ಲಿ ದಾಖಲಾಗಿದೆ, ಕಿಲ್ಲಾ ಭಾಗ ಪಂ.ಭೀಮಸೇನರ ಅತ್ಯಂತ ಒಡನಾಡಿ ಭಾಗವಾಗಿತ್ತು, ಅವರ ವಿಧಿವಶವಾಗುತ್ತಿದ್ದಂತೆ ಅವರು ವಾಸವಾಗಿದ್ದ ಈಗಿನ ಕೆ.ಎಸ್.ಪರ್ವತಿಕರ ಅವರ ಮನೆಯ ಜಂತಿಯೂ ಸಹ ಕಂಬನಿ ಮಿಡಿಯುತ್ತಿತ್ತು, ಅವರ ರಂಗ ತಾಲೀಮುಕ್ಕೆ ಸಾಕ್ಷಿ ನಮ್ಮ ಮನೆಯ ಜಂತಿಗಳೆಂದು ದುಖಃದಿಂದ ಹೇಳುತ್ತಾರೆ, ಮನೆಯ ಸದಸ್ಯನೋರ್ವನ್ನು ಕಳೆದುಕೊಂಡಂತೆ ದುಖಃದಲ್ಲಿರುವ ಕೆ.ಎಸ್.ಪರ್ವತಿ ಅವರ ಮನೆಯಲ್ಲಿ ಮೌನ ಮನೆಮಾಡಿದೆ.
ಕಿರಿಯ ಕಲಾವದರ ಮಾಡುವ ತಪ್ಪುಗಳನ್ನು ತಿದ್ದಿ ಅವರಿಗೆ ಸ್ಪೂತರ್ಿ ನೀಡುತ್ತಿದ್ದ ಪಂ.ಭೀಮಸೇನ ಜೋಶಿಯವರಿಗೆ ಪೂಣೆಯಲ್ಲಿ ಮಂತ್ರಾಲಯದ ಶ್ರೀ ಸುಶುಮೀಂದ್ರತೀರ್ಥ ಮಹಾಸ್ವಾಮಿಗಳು ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನನ್ನ ಕಾರ್ಯಕ್ರಮ ಆಯೋಜನೆಯಾಗಿತ್ತು, ಅವರ ಸಮ್ಮುಖದಲ್ಲಿಯೇ ನಾನು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ, ಕಾರ್ಯಕ್ರಮದ ನಂತರ ಪಂ.ಭೀಮಸೇನರನ್ನು ಭೇಟಿಯಾಗಿ ನಾನು ಬಾಗಲಕೋಟೆಯವನು ಎಂದು ಹೇಳಿದಾಗ ಅವರ ಸಂತೋಷ ಮುಗಿಲುಮುಟ್ಟಿತ್ತು, ನೀನೊಬ್ಬ ಒಳ್ಳೆಯ ಗಾಯಕ ಎಂದು ಪ್ರಶಂಶಿಸಿ ನನಗೆ ಸ್ಪೂತರ್ಿ ನೀಡಿದ್ದರೂ ಎಂದು ಅಳುತ್ತ ಹೇಳುತ್ತಾರೆ ಖ್ಯಾತ ಗಾಯಕ ನಗರದ ಅನಂತ ಕುಲಕಣರ್ಿಯವರು.

ಭಾಸ್ಕರ ಮನಗೂಳಿ

Sunday, December 12, 2010

ಚನೈನಲ್ಲಿ ನಡೆಯುವ ಅಂತರಾಷ್ಟ್ರೀಯ ಶ್ವಾನ ಪ್ರದರ್ಶನದಲ್ಲಿ ಮುಧೋಳ ನಾಯಿ

ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ಚನೈಗೆ ಹೊರಟ ಮುಧೋಳ ತಳಿ ನಾಯಿಗಳ ತಂಡಕ್ಕೆ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಹಾಗೂ ಇಲಾಖೆಯ ಅಧಿಕಾರಿಗಳು ಶುಭ ಕೋರಿದರು.

ಬಾಗಲಕೋಟೆ  ;  ಆದಿಲ್ ಶಾಹಿ ರಾಜ್ಯದ ರಾಜಧಾನಿ ಬಿಜಾಪೂರದ ಅಂದಿನ ಅವಿಭಾಜ್ಯ ಅಂಗವಾಗಿದ್ದ ಮುಧೋಳ ಪ್ರಾಂತ್ಯದ ಶ್ರೀಮಂತ ರಾಜ ಮಾಲೋಜಿರಾವ್ ಘೋರ್ಪಡೆ ಮತ್ತು ಲೆಫ್ಟಿನಂಟ್ ನಾನಾ ಸಾಹೇಬ ಚಂದನಶಿವಾ ಅವರು ಪೋಷಣೆಯಲ್ಲಿ ಅಭಿವೃದ್ದಿ ಹೊಂದಿದ ಮುಧೋಳ ತಳಿ ನಾಯಿ ಈಗ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದ್ದು ಡಿಸೆಂಬರ್ ದಿ.11 ಹಾಗೂ 12 ರಂದು ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ನಗರದಿಂದ ಇಂದು ತೆರಳಿದವು.
ಬೇಟೆ ಯಾಡಲು ಸುಪ್ರಸಿದ್ದವಾಗಿರುವ ಮುಧೋಳ ತಳಿ ನಾಯಿಗಳು ಅತ್ಯಂತ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು ಓಟಕ್ಕೆ ಅನುಕೂಲವಾಗುವಂತೆ ಕಾಲುಗಳು ಮತ್ತು ದೇಹರಚನೆ ಇದ್ದು ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವ ಪೈಪೋಟಿ ಹೊಂದಿರುವ ಈ ನಾಯಿಗಳು ಅತ್ಯಂತ ಪ್ರಾಮಾಣಿಕ ಕಾವಲುಗಾರ ನಾಯಿಯಾಗಿದೆ. ಒಟ್ಟು 23 ಅತ್ಯುತ್ತಮ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಯೋಗ್ಯವುಳ್ಳ ನಾಯಿಗಳು ಬಾಗಲಕೋಟೆಯಿಂದ ತೆರಳಿದ್ದು 8 ಹೆಣ್ಣು ನಾಯಿ ಹಾಗೂ 15 ಗಂಟು ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಡೊಂಕು ಬಾಲದ ನಾಯಿಗಳ ವಿರುದ್ದವಾಗಿ ಈ ನಾಯಿಗಳ ಬಾಲ ನೇರವಾಗಿ ಇರುತ್ತದೆ, ತನ್ನದೆ ಆದ ವೈಶಿಷ್ಠ್ಯತೆ ಹೊಂದಿರುವ ಈ ನಾಯಿ ತಳಿಗೆ ಅಂತರಾಷ್ಟ್ರೀಯ ಮಟ್ಟಕ್ಕೆ ಸೇರ್ಪಡೆಯಾಗಿರುವದು ಕನರ್ಾಟಕದ ಹೆಮ್ಮೆಯ ಪ್ರತೀಕವಾಗಿದೆ. ಇಂದು ಸ್ಥಳೀಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಈ ನಾಯಿ ತಳಿಯ ಸರ್ವತೋಮುಖ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಸಹ ಹಾಕಿಕೊಂಡಿದ್ದು ಕನರ್ಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಮುಧೋಳದ ತಿಮ್ಮಾಪೂರ ರಸ್ತೆಯಲ್ಲಿ ಶ್ವಾನ ಸಂಶೋಧನಾ ಕೇಂದ್ರವನ್ನು ಸಹ ಪ್ರಾರಂಭಿಸುತ್ತಿದೆ. ಸಕರ್ಾರ ಹಾಗೂ ವಿಶ್ವವಿದ್ಯಾಲಯಕ್ಕಿಂತ ಮುಖ್ಯವಾಗಿ ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಕುಟುಂಬ ಲೆಫ್ಟಿನೆಂಟ್ ಚಂದನಶಿವ ಕುಟುಂಬಕ್ಕೆ ಈ ನಾಯಿ ತಳಿ ಅಭಿವೃದ್ದಿ ಪಡಿಸುವದಕ್ಕಾಗಿ ಇನಾಮ ನೀಡಿದ್ದರು, ಇಂದಿಗೂ ಚಂದನಶಿವ ಕುಟುಂಬ ಈ ನಾಯಿ ತಳಿಯನ್ನು ಪೋಷಿಸಿ ಅಭಿವೃದ್ದಿ ಪಡಿಸುತ್ತಿದ್ದಾರೆ.
ಮುಧೋಳ ತಳಿ ನಾಯಿಯನ್ನು 1969 ರಲ್ಲಿಯೇ ಭಾರತ ರಾಷ್ಟ್ರೀಯ ಕೆನಲ್ ಕ್ಲಬ್ ನಿಂದ ಅಂಗೀಕ್ರತಗೊಂಡಿತ್ತು ಅಲ್ಲದೆ 1990 ರಲ್ಲಿ ಮೈಸೂರು ಕೆನಲ್ ಕ್ಲಬ್ ಈ ತಳಿಯ ನಾಯಿಗಳ ಪ್ರದರ್ಶನಕ್ಕಾಗಿ ಪ್ರಮುಖ ವೇದಿಕೆ ಕಲ್ಪಿಸಿಕೊಟ್ಟಿತ್ತು. ಸಧ್ಯ ಈ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದೆ.
ಶ್ವಾನಗಳನ್ನು ಹಾಗೂ ಶ್ವಾನ ಮಾಲೀಕರನ್ನು ಬೀಳ್ಕೊಟ್ಟು ಈ ಸಂದರ್ಭದಲ್ಲಿ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿರುವ ಮುಧೋಲ ನಾಯಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು ಮುಧೋಳ ನಾಯಿ ತಳಿಗಳನ್ನು ಜಗತ್ತಿನಾದ್ಯಂತ ಪರಿಚಯಿಸಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ರ ವಿರುದ್ದ ಪ್ರಪ್ರಥಮವಾಗಿ ಬಂಡಾಯ ಎದ್ದಿದ್ದ ಮುಧೋಳ ತಾಲೂಕಿನ ಹಲಗಲಿಯ ವೀರರಾದ ರಾಮ, ಬಾಲ, ಜಡಗಾ ಅವರ ಸಾತ್ ನೀಡಿದ ನಾಯಿ ತಳಿ ಸಧ್ಯ ಅಂತರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಚನೈಗೆ ತೆರಳಿವೆ. ಮುಧೋಳ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದುತ್ತಿರುವದು ಹೆಮ್ಮೆ ಸಂಗತಿ ಎಂದು ಸಾರ್ವಜನಿಕರು ಹರ್ಷದಿಂದ ಹೇಳುತ್ತಿದ್ದಾರೆ.

Sunday, December 5, 2010

ಮಕ್ಕಳ ಪ್ರತಿಭಾ ಪ್ರದರ್ಶನ ; ಅಂಧ ಕಲಾವಿದೆ ಕೃತಿಕಾ

                                                        ಅಂಧ ಕಲಾವಿದೆ ಕೃತಿಕಾ ಜಂಗಿನಮಠ.

                                                 ಶ್ರೀನಿಧಿ ವೀರಾಪೂರ ಅವರ ನವಿಲು ನೃತ್ಯದ ಭಂಗಿ.


                                 ಪುಟ್ಟ ಬಾಲಕ ನಚಿಕೇತ ದೊಡ್ಡಬಸವರಾಜ ಕೀ ಬೋರ್ಡ ವಾದನ ಮಾಡುತ್ತಿರುವದು.

 ಬಾಗಲಕೋಟೆ 5- ನವನಗರದ ಕಲಾಭವನ ಚಪ್ಪಾಳೆ ಸದ್ದಿನಿಂದ ಸಂಭ್ರಮಿಸಿತ್ತು, ಅಂಧ ಕಲಾವಿದೆಯ ಕೊಳಲು ವಾದನಕ್ಕೆ ತಲೆದೂಗಿಸಿ, ಕಲಾಸ್ವಾದನೆ ಮಾಡಿ ಚಪ್ಪಾಳೆಯ ಮೂಲಕ ಆಕೆಯ ಕಲೆಗೆ ಪ್ರೋತ್ಸಾಹ ನೀಡಿದ ಜನ ಕೊಳಲಿನ ನಿನಾದದ ಗುಂಗಿನಲ್ಲಿ ತೇಲಾಡಿದರು.
ಅಂಧ ಕಲಾವಿದೆ ವಿಜಾಪೂರದ ಪುಟ್ಟ ಬಾಲಕಿ ಕೃತಿಕಾ ಜಂಗಿನಮಠ ಅವರ ಕೊಳಲಿನ ನಿನಾದ ಆಸ್ವಾದಿಸಲು ಅನುವು ಮಾಡಿಕೊಟ್ಟವರು ಗದ್ದನಕೇರಿಯ ಶರಣ ನೂಲಿಚಂದಯ್ಯ ಶಿಕ್ಷಣ ಗ್ರಾಮೀಣಾಭಿವೃದ್ದಿ ಸಂಸ್ಥೆ. ಇದರ ಸಾರಥಿ ವಿಜಯಕುಮಾರ ಅವರ ತಂಡ ಈ ಬಾಲಕೀಯ ಕಲೆ ಪ್ರದಶರ್ಿಸಲು ಒಂದು ಅದ್ಭುತ ವೇದಿಕೆ ನಿಮರ್ಿಸಿ ಆ ವೇದಿಕೆಯಲ್ಲಿ ಪುಟ್ಟ ಪುಟಾಣಿಗಳ ಕಲಾ ಪ್ರತಿಭಾ ಪ್ರದರ್ಶನವೂ ಜರುಗಿತು.
ರಾಜ್ಯದ ವಿವಿಧೆಡೆಯಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಬಾಲಕಿ ಕೃತಿಕಾ ಅಂಧವಾಗಿದ್ದರೂ ಕಲಾ ದೃಷ್ಠಿ ಮಾತ್ರ ಅಗಾಧವಾದದ್ದು, ಜನರು ಆಕೆಯ ಕಲೆಯನ್ನು ಆಸ್ವಾದಿಸುವದನ್ನು ನೋಡದ ಈ ಬಾಲಕಿ ಜನರು ನೀಡುವ ಚಪ್ಪಾಳೆಯೇ ಈಕೆಗೆ ಪ್ರೋತ್ಸಹಾ. ಅಣ್ಣ ಕಾತರ್ಿಕ ಜಂಗಿನಮಠ ಈಕೆಗೆ ತಬಲಾ ಸಾಥ್ ನೀಡುತ್ತಾನೆ. ನೀ ತಂದ ಕಾಣಿಕೆ ಚಿತ್ರದ ಜೇನಿನ ಹೊಳೆಯೋ...,ಹಾಲಿನ ಮಳೆಯೋ..., ಶಿಶುನಾಳ ಶರೀಫರ ತರವಲ್ಲಾ ತಗೀ ನಿನ್ನ ತಂಬೂರಿ..., ಭೂಪ ರಾಗ ಸೇರಿದಂತೆ ಮತ್ತಿತರ ಚಿತ್ರ ಗೀತೆಗಳನ್ನು, ರಾಗಗಳನ್ನು ನುಡಿಸಿದ ಕೃತಿಕಾ ಅತ್ಯಂತ ಪ್ರತಿಭಾವಂತಳಾಗಿದ್ದಾಳೆ ಎನ್ನುವದು ನೆರೆದ ಜನ ಆಕೆಗೆ ನೀಡಿದ ಪ್ರೋತ್ಸಾಹ ದಿಂದ ತಿಳಿಯಬಹುದು. ಆಕೆಯ ಕಲೆಗೆ ಮೆಚ್ಚಿ ಕೆಲವರು ಗೌರವ ಕಣಿಕೆ ನೀಡಿದ್ದಾರೆ.
ಇನ್ನೂಳಿದಂತೆ ವಿಕಿ ಹಾಗೂ ತಂಡದವರು ಚಿತ್ರ ಗೀತೆಗಳನ್ನು ಸಾದರ ಪಡಿಸಿದರು, ಪುಟ್ಟ ಪುಟಾಣಿಗಳು ತಮ್ಮ ಪ್ರತಿಭೆಗಳನ್ನು ಸಹ ಸಾದರಪಡಿಸಿದರು. ಶ್ರೀನಿಧಿ ವೀರಾಪುರ ಎಂಬ ಪುಟ್ಟ ಬಾಲಕಿ ನವಿಲು ನೃತ್ಯ ಮಾಡಿ ಜನ ಮೆಚ್ಚುಗೆ ಪಡೆದಳು. ನಚಿಕೇತ ದೊಡ್ಡಬಸವರಾಜ ಅನಿಸುತಿದೆ ಯಾಕೋ ಇಂದು..., ಗೀತೆಗೆ ಕೀ ಬೋರ್ಡ ವಾದನ ಮಾಡಿ ಶಬ್ಬಾಸ್ಗೀರಿ ಪಡೆದರು.
ನಗರಸಭೆ ಅಧ್ಯಕ್ಷ ಶ್ರೀಮತಿ ಜ್ಯೋತಿ ಭಜಂತ್ರಿ ಸೇರಿದಂತೆ ಸೇರಿದ್ದ ಮಕ್ಕಳೆಲ್ಲ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಧ ಕಲಾವಿದೆ ಕೃತಿಕಾಳಿಗೆ ಶರಣ ನೂಲಿಚಂದಯ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಯೂರೋ ಕಿಡ್ಸ ಸೇರಿದಂತೆ ಹಲವಾರು ಸಂಸ್ಥೆಗಳು, ಗಣ್ಯರು ಕೃತಿಕಾಳಿಗೆ ಗೌರವ ಕಾಣಿಗೆ ಅಪರ್ಿಸಿದರು.

Friday, December 3, 2010

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಸಾಮೂಹಿಕ ವಿವಾಹ

           ಬಾಗಲಕೋಟೆ 3- ಒಬ್ಬರಿಗೆ ಕಾಲಿಲ್ಲ, ಇನ್ನೂ ಕೆಲವರು ಅಂಧರು, ಇನ್ನೂ ಕೆಲವರು ನಡೆಯಲು ಬಾರದವರು, ಇವರ ಕೈ ಹಿಡಿದವರು ಸಾಮಾನ್ಯರು. ಜಾತಿ ಬೇಧವಷ್ಟೆ ಅಲ್ಲ ಧರ್ಮ ಭೇಧವೂ ಇರಲಿಲ್ಲ, ಮಾನವೀಯತೆ ಮೌಲ್ಯ ಇಲ್ಲಿ ಎದ್ದು ಕಾಣುತ್ತಿತ್ತು. ವಿಶ್ವ ಅಂಗವಿಕಲ ದಿನಾಚರಣೆಯ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿನ ವೈಶಿಷ್ಠ್ಯ.
ಶಬರೀಶ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಸ್ಥೆ, ಇಳಕಲ್ನ ಆಶಾದೀಪ ಸಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿ ಸಾವಿವಾರು ಜನ ಆಗಮಿಸಿದ್ದರು. ಶ್ರೀಗಳ ಮಂತ್ರೋದ್ಘಾರ, ಮೌಲ್ವಿಗಳ ಉಪದೇಶದಡಿಯಲ್ಲಿ ನಡೆದ ಈ ಭಾವಪೂರ್ಣ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಅಂಗವಿಕಲರು, ವಧು ಅಂಗವಿಕಲೆಯಾದರೆ ವರ ಸಮಾನ್ಯ, ವರ ಅಂಗವಿಕಲೆಯಾದರೆ ವಧು ಸಾಮಾನ್ಯದವಳಾಗಿದ್ದಳು. ಆತ್ಮಬಲವನ್ನು ಜೊತೆಗಿಟ್ಟುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜಿಲ್ಲೆಯ ನಾನಾಭಾಗಳಿಂದ ಮಾತ್ರವಲ್ಲದೆ ಪಾವಗಡ, ಕೋಲಾರ ಮತ್ತಿರಡೆಗಳಿಂದ ಆಗಮಿಸಿದ್ದ ಜೋಡಿಗಳು ಈ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಷ್ಟ್ರ ಪ್ರಶಸ್ತಿ ವಿಜೇತ ವಿಕಲಚೇತನ ಘನಶ್ಯಾಂ ಭಾಂಡಗೆಯವರ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಇಳಕಲ್ ಗುರು ಮಹಾಂತ ಸ್ವಾಮಿಗಳು ಮಂತ್ರವನ್ನು ಉಪದೇಶಿಸಿದರು, ಸಂದರ್ಭಕ್ಕನುಸಾರವಾಗಿ ಅಶೋಕ ಕಲಬುಗರ್ಿ ವಚನಗಳನ್ನು ಸಾದರ ಪಡಿಸಿದರು.
ಮುಂಬೈ ಭಯೋತ್ಪಾದನೆಯಲ್ಲಿ ವೀರ ಮರಣಹೊಂದಿದ ಸಂದೀಪ ಉನ್ನಕೃಷ್ಣನ್ ತಂದೆ ಕೆ.ಉನ್ನಿಕೃಷ್ಣನ್, ತಾಯಿ ಧನಲಕ್ಷ್ಮೀಯವರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ ವಿಶೇಷವಾಗಿತ್ತು. 14 ಅಂಗವಿಕಲ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸರ್ವ ಧಮರ್ಿಯರು ಪಾಲ್ಗೊಂಡಿದ್ದರು. ಭಾವೈಕ್ಯತೆಯ ಸಂದೇಶ ಸಾರಿದ ಸಾಮೂಹಿಕ ವಿವಾಹದಲ್ಲಿ 8 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಹುಲಿಯಪ್ಪ ಕುರಿ ಜೊತೆ ರೇಣುಕಾ ಮುತಗಣ್ಣವರ, ಶಿವಪುತ್ರಪ್ಪ ಬಾಗಿ ಜೊತೆ ಲಕ್ಷ್ಮೀ ಪೂಜಾರಿ, ರುದ್ರಪ್ಪ ಅಡಿವೆಪ್ಪ ಜೊತೆ ಮಂಜುಳಾ ಪೂಜಾರಿ, ದಾನಯ್ಯ ಕಾಂಬಳೆಮಠ ಜೊತೆ ಶಾಂತಾ ಹಿರೇಮಠ, ಮಂಜುನಾಥ ಕಂಬಾರ ಜೊತೆ ಸುಮಕ್ಕಾ ಕುರಿಯವರ, ಮಂಜುನಾಥ ಸಾವಕಾರ ಜೊತೆ ಮಹಾದೇವಿ ಗಾಣಿಗೇರ, ಮಲ್ಲಪ್ಪ ಜಿಕ್ಕಣ್ಣವರ ಜೊತೆ ಲಾಯವ್ವ ನಂದ್ಯಾಳ, ಈಶ್ವರ ಕಿತ್ತಲಿ ಜೊತೆ ಗಂಗಮ್ಮಾ ನವಲಗುಂದ, ಶ್ರೀಶೈಲ ಕೊಲ್ಕಾರ ಜೊತೆ ಲಕ್ಷ್ಮೀಬಾಯಿ ಹಿರೇಮಠ, ಕುಮಾರ ಜಾಧವ ಜೊತೆ ಸಂಗೀತಾ ಪವಾರ, ರಾಮಾಂಜನೇಯ ದೊಡ್ಡಕರಿಯಪ್ಪ ಜೊತೆ ಶ್ಯಾಮಲಾ ಎಂ.ಎಸ್., ಮಹ್ಮದರಫೀಕ ಮುದ್ದೇಬಿಹಾಳ ಜೊತೆ ಶಂಶದಾಬೇಗಂ ಸೋಲ್ಲಾಪೂರ, ಸೈದುಸಾಬ ಕೆರೂರ ಜೊತೆ ಸೈನಾಜಬೇಗಂ ಬುಡ್ಡೇಸಿ, ಯಮನೂರಪ್ಪ ತಳವಾರ ಜೊತೆ ಈರಮ್ಮ ದಿದ್ದಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಾಗಿದ್ದು ಶ್ರೀಗಳು, ಉನ್ನಿಕೃಷ್ಣನ್ ದಂಪತಿಗಳು, ಮಾಜಿ ಸಚಿವರು, ಗಣ್ಯರು ಸೇರಿದಂತೆ ಸಾವಿವಾರು ಜನರು ಆಶೀರ್ವದಿಸಿದರು.
ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಮಹಾಂತಸ್ವಾಮಿಗಳು ಅಧ್ಯಕ್ಷತೆ ವಹಿಸಿ ನವವಧುವರರಿಗೆ ಉಪದೇಶಿಸಿದರು. ಜೀವನದ ಸಾರವನ್ನು ಅಥರ್ೈಸಿಕೊಟ್ಟರು. ಚರಂತಿಮಠದ ಶ್ರೀ ಮ.ನಿ.ಪ್ರ ಪ್ರಭುಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ ಎಂದು ಸಲಹೆ ನೀಡಿದರು. ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಶಿರೂರಿನ ಡಾ.ಬಸವಲಿಂಗ ಮಹಾಸ್ವಾಮಿಗಳು, ಭೋವಿ ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಭುಲಿಂಗೇಶ್ವರ ಶುಗರ್ಸ ಅಧ್ಯಕ್ಷ ಜಗದೀಶ ಗುಡಗುಂಟಿ, ಮಾಜಿ ಸಚಿವ ಹುಲ್ಲಪ್ಪ ಮೇಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಶ್ರೀನಿವಾಸ ಬಳ್ಳಾರಿ, ವಿಜಾಪೂರದ ಎಂ.ಎಸ್.ಖೇಡ, ಡಾ.ಶ್ರೀಮತಿ ಅರುಣಾ ಅಕ್ಕಿ, ಶೀಮತಿ ಜಯಶ್ರೀ ಸಾಲಿಮಠ, ಎಸ್.ಎಸ್.ರೇಷ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಎಸ್.ಎಚ್.ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿದ್ದರಾಮ ಮನಹಳ್ಳಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ಉನ್ನಿಕೃಷ್ಣನ್ ಹಾಗೂ ಶ್ರೀಮತಿ ಧನಲಕ್ಷ್ಮೀ ಉನ್ನಿಕೃಷ್ಣನ್ ಈ ಸಮಾರಂಭದ ಕೇಂದ್ರ ಬಿಂದುಗಳಾಗಿದ್ದರೂ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಘನಶ್ಯಾಂ ಭಾಂಡಗೆ ಅವರು ಮಾಡುತ್ತಿರುವ ಕಾರ್ಯ ಅಭೂತಪೂರ್ವವಾದದ್ದು, ನವ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಬಾಳಿ ತಮ್ಮ ಮನೆಯನ್ನು ಬೆಳಗಿರಿ ಎಂದು ಶುಭಹಾರೈಸಿದರು.
ಶಬರೀಶ ಅಂಗವಿಕಲ ಕ್ಷೇಮಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಘನಶ್ಯಾಂ ಭಾಂಡಗೆ, ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಅಧ್ಯಕ್ಷ ರಘು ಹುಬ್ಬಳ್ಳಿ, ಈ ಸಮಾರಂಭದ ಸಂಚಾಲಕ ಅನಂತ ಧೋಂಗಡಿ, ಸಹ ಸಂಚಾಲಕಿ ಶ್ರೀಮತಿ ಸ್ಪೂತರ್ಿ ಭಟ್ ನೇತೃತ್ವ ವಹಿಸಿದ್ದರು. ಮಹೆಬೂಬ ತೊಣಶ್ಯಾಳ, ಸುರೇಶ ತುಳಗೇರಿ, ದ್ಯಾಮಣ್ಣ ಬೆಲ್ಲದಡಿ, ಸಂಗಮೇಶ ಭಾವಿಕಟ್ಟಿ ಇವರ ಕೈ ಜೋಡಿಸಿದ್ದರು.
ಒಟ್ಟಾರೆಯಾಗಿ ಅದ್ದೂರಿ ಸಮಾರಂಭದಲ್ಲಿ ಅಂಗವಿಕಲರ ದಿನಾಚರಣೆಯಂದು 14 ವಿಕಲಚೇತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾವಿರಾರು ಜನರು ಆಶೀರ್ವದಿಸಿದರು.