Sunday, May 1, 2011

                        ಧಮ್ ಮಾರೋ ಧಮ್...,
 
                                                       ಗಾಂಜಾ ಆವರಿಸಿಕೊಂಡರೆ ಜೀವನವೆಲ್ಲ ಸಜ.

ವ್ಯಾಪಕವಾಗಿ ಹರಡುತ್ತಿರುವ ಗಾಂಜಾ ಫ್ಯಾಶನ್ ; ಜಾಲಾಡಬೇಕಾಗಿದೆ ಇದರ ಇಂಟರ್ ಕನೆಕ್ಷನ್


ಬಾಗಲಕೋಟೆ ; ವಿದ್ಯಾಥರ್ಿಗಳು ಫ್ಯಾಶನ್ಗಾಗಿ ಏನ ಏನ ಮಾಡುತ್ತಿದ್ದಾರೆ ಎಂದು ತಿಳಿಸುವ ಅಚ್ಚರಿಯ ವಿಷಯ ಬಾಗಲಕೋಟೆ ನಗರದಲ್ಲಿದೆ. ಗುಂಪು ಗುಂಪಾಗಿ ಸೇರಿ, ದೂರದ ಪ್ರದೇಶಕ್ಕೆ ಹೋಗಿ ಜಿದ್ದಿಗೆ ಬಿದ್ದು ಸೇದುತ್ತಾರೆ, ಅದರಿಂದ ದೇಹದಾಡ್ರ್ಯತೆ ಹೆಚ್ಚಿಸಿಕೊಳ್ಳಬಹುದು, ಶಕ್ತಿವಂತರಾಗಬಹುದು, ಧೈರ್ಯ ಹೊಂದಬಹುದು ಎಂದೆಲ್ಲ ನಂಬಿಕೆಗಳನ್ನು ಇಟ್ಟುಕೊಂಡು ನಿತ್ಯ ಕಾಲೇಜು ಮುಗಿಸಿಕೊಂಡು ಸಂಜೆ ನಗರ ಹೊರವಲಯಕ್ಕೆ ವಾಯುವಿಹಾರಕ್ಕೆಂದು ಹೋಗುವ ವಿದ್ಯಾಥರ್ಿಗಳು ಗುಂಪು ಗುಂಪಾಗಿ ಗಾಂಜಾ ಸೇದುತ್ತಾರೆ, ಇದು ಪಾಶ್ಚಿಮಾತ್ಯದ ಅಂಧಾನುಕರಣೆ.
ಬಾಗಲಕೋಟೆ ವಿದ್ಯಾನಗರಿ, ಸರಸ್ವತಿ ಧಾಮ, ವಿದ್ಯಾ ದಾಸೋಹ ಕ್ಷೇತ್ರ ಎಂದೆಲ್ಲ ಪ್ರಸಿದ್ಧಿ ಪಡೆದಿದೆ, ದೂರದೂರದಿಂದ ವಿದ್ಯಾಥರ್ಿಗಳು ಇಲ್ಲಿ ಕಲಿಯಲು ಆಗಮಿಸುತ್ತಾರೆ, ದೂರದ ರಾಜಸ್ಥಾನ, ಗುಜರಾತ, ಕಾಶ್ಮೀರ, ಹಿಮಾಚಲ, ಅರುಣಾಚಲ, ಮಣಿಪುರ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳ ವಿದ್ಯಾಥರ್ಿಗಳು ಇಲ್ಲಿ ಅಧ್ಯಯನ ಮಾಡಲು ಆಗಮಿಸುತ್ತಾರೆ, ಕಾಲೇಜಿನ ವಸತಿ ನಿಲಯಗಳಲ್ಲಿ ಕೆಲವರು ಮಾತ್ರ ಪ್ರವೇಶ ಪಡೆಯುತ್ತಿದ್ದು ಉಳಿದವರೆಲ್ಲ ಬಾಡಿಗೆ ರೂಂ ಪಡೆದು ವಾಸಿಸುತ್ತಾರೆ, ಇಲ್ಲಿ ಅವರಿಗೆ ಯಾರೂ ಮೇಲ್ವಿಚಾರಕರು ಇರೋದಿಲ್ಲ.
ದೂರದಿಂದ ಬಂದಂತಹ ಕೆಲ ವಿದ್ಯಾಥರ್ಿಗಳ ಜೊತೆ ಇಲ್ಲಿನ ಕೆಲ ವಿದ್ಯಾಥರ್ಿಗಳು, ಪಡ್ಡೆ ಯುವಕರು ಸ್ನೇಹ ಬೆಳೆಸಿ ಅವರಂತೆ ಕುಣಿಯಲು ಪ್ರಾರಂಭಿಸಿ ಕೊನೆಗೆ ದುಶ್ಚಟದ ಹಂತಕ್ಕೆ ತಲುಪಿ ಇಲ್ಲಿನ ಗಾಂಜಾ ಸೇದುವ ಯುವಕರ ಜೊತೆಗೂಡಿ ಹೊರ ರಾಜ್ಯದ ಯುವಕರು ಸಹ ದುಶ್ಚಟಕ್ಕೆ ಬಲಿಯಾಗುತ್ತಾರೆ. ಬೇಕಾಬಿಟ್ಟಿಯಾಗಿ ಮಾರಾಟವಾಗುತ್ತಿರುವ ಗಂಜಾ ಸಂತೆಯಲ್ಲೊಂದೆ ಸಿಗುವದು ಮಾತ್ರ ಬಾಕಿ ಇದೆ. ಗಾಂಜಾ ಮಾರುವವರು ಮೋಬೈಲ್ ನಂ. ಪಡೆದುಕೊಂಡು ಮೋಬೈಲ್ ಮೂಲಕವೇ ವ್ಯವಹರಿಸಿ ತಾವಿದ್ದ ಸ್ಥಳಕ್ಕೆ ತಂದು ಕೊಡುವಂತೆ ಕೋರಿ ಗಾಂಜಾ ತಗೆದುಕೊಂಡು ಹೊರವಲಯಕ್ಕೆ ಹೋಗಿ ಸೇದುತ್ತಾರೆ. ಇದು ನೈಜ ಸ್ಥಿತಿಯಾದರೂ ಇದರ ಬಗ್ಗೆ ಗಂಭೀರವಾಗಿ ಯೋಚಿಸುವಂತಹ ಪ್ರವೃತ್ತಿ ಇನ್ನೂ ರೂಢಿಯಲ್ಲಿ ಬಂದಿಲ್ಲ.
ಕಾಲೇಜು ಆಡಳಿತ ಮಂಡಳಿ ವಸತಿನಿಯಲದ ವಿದ್ಯಾಥರ್ಿಗಳನ್ನು ಮಾತ್ರ ತಮ್ಮ ಶಿಸ್ತು ಬದ್ಧತೆಯಲ್ಲಿ ಇಟ್ಟುಕೊಂಡಿರುತ್ತಾರೆ, ಬಾಡಿಗೆ ರೂಂ ಪಡೆದ ವಿದ್ಯಾಥರ್ಿಗಳಿಗೆ ಹೇಳುವವರು ಇಲ್ಲ, ಕೇಳುವವರಂತೂ ಇಲ್ಲವೇ ಇಲ್ಲ. ನಗರ ದೊಡ್ಡ ದೊಡ್ಡ ಮನತನದ ಯುವಕರು, ವಿದ್ಯಾಥರ್ಿಗಳು ಗಾಂಜಾ ಸೇದುವ ಪ್ರವೃತ್ತಿಗೆ ಮಾರುಹೋಗಿ ನಿತ್ಯ ಸೇದುವದು ಒಂದು ಫ್ಯಾಶನ್ ಆಗಿ ಪರಿವರ್ತನೆಯಾಗಿದೆ. ಈ ಫ್ಯಾಶನ್ ಯುವ ಸಮುದಾಯಕ್ಕೆ ಮಾರಕ ಎಂದು ತಿಳಿಸಿಕೊಡುವ ಅವಶ್ಯಕತೆ ಇದೆ, ಗಾಂಜಾ ಮಾರುವವರನ್ನು ಪೋಲಿಸರು ಬಂಧಿಸುವ ಅಗತ್ಯತೆ ಇದ್ದು ಮಾರುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಾಗಿದೆ.
ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಬ್ರಾಡಗೇಜ್ ರೈಲು ಪ್ರಾರಂಭವಾದಾಗಿನಿಂದಲೂ ಬೆರೆ ಬೆರೆ ಪಟ್ಟಣಗಳಿಂದ ಮಾನಸಿಕ ಅಸ್ವಸ್ಥರು ರೈಲಿನ ಮುಖಾಂತರ ಆಗಮಿಸಿದ್ದಾರೆ, ಅಂತಹವರಿಗೆ ಗಾಂಜಾ ಪ್ರತಿ ಕ್ಷಣದ ಸಂಗಾತಿ, ಎಲ್ಲೆಂದರಲ್ಲಿ ಗಾಂಜಾ ಸೇದುವ ಅವರ ಬಳಿ ಯುವಕರು ಹೋಗಿ ಕೆಲವರು ಹಣ ಕೊಟ್ಟು ಖರೀದಿ ಮಾಡಿದರೆ ಇನ್ನು ಕೆಲವರು ಕಿತ್ತುಕೊಂಡು ಬರುತ್ತಾರೆ.
ಯುವ ಸಂಘಟನೆಗಳು, ವಿದ್ಯಾಥರ್ಿ ಸಂಘಟನೆಗಳು ರಾಷ್ಟ್ರ, ರಾಜ್ಯ ಸಮಸ್ಯೆಗಳನ್ನು ಕೆಲ ಹೊತ್ತು ಬದಿಗಿಟ್ಟು ಭಾರತದ ಬುನಾದಿ ಎಂದು ಕರೆಯಿಸಿಕೊಳ್ಳುವ ಯುವಕರನ್ನು ಮೊದಲು ತಿದ್ದುವ ಅವಶ್ಯಕತೆ ಇದೆ, ಯುವಕರ ಮನತಟ್ಟುವ ಹಾಗೆ ಮನವರಿಕ ಮಾಡಿ ಇಂತಹ ದುಶ್ಚಟಗಳಿಂದ ಬಿಡುಗಡೆಗೊಳಿಸಿಬೇಕು, ಪೋಲಿಸ ಇಲಾಖೆ ಇನ್ನಾದರ ಎಚ್ಚೆತ್ತುಕೊಂಡು ಗಾಂಜಾ ಮಾರುವವರನ್ನು ಬಂಧಿಸಬೇಕು.


ಭಾಸ್ಕರ ಮನಗೂಳಿ