Tuesday, November 30, 2010

"ವಿಶ್ವ ಏಡ್ಸ ದಿನಾಚರಣೆಯ ಅಂಗವಾಗಿ ವಿಶೇಷ ವರದಿ"



ಬಾಗಲಕೋಟೆ 30- ನಕ್ಕು ನಲಿದಾಡಿ, ಎಲ್ಲರ ಜೊತೆ ಬೆರೆತು ತಾಯಿಯ ವಾತ್ಸಲ್ಯ ಪಡೆದು, ತಂದೆಯ ಪೋಷಣೆಯಲ್ಲಿ ಸುಖವಾಗಿ ಮಕ್ಕಳು ಬೆಳೆಯಬೇಕು ಅಲ್ವಾ..., ಆದರೆ ಇಲ್ಲಿದೆ ನೋಡಿ ಒಂದು ವಿಶಿಷ್ಠ ವರದಿ, ಈ ಮಕ್ಕಳಿಗೆ ತಾಯಿ ವಾತ್ಸಲ್ಯ ತಂದೆಯ ಪೋಷಣೆ ಎರಡು ಸಿಕ್ಕಿದೆ, ಎಲ್ಲರ ಜೊತೆ ಬೆರೆಯಲೂ ಅವಕಾಶ ಸಿಕ್ಕಿದೆ ಆದರೆ ಜವರಾಯ ಸದಾ ಇವರ ಬೆನ್ನಹಿಂದಯೇ ಜೋತು ಬಿದ್ದುರುತ್ತಾನೆ, ಹೈದಯ ಮೀಡಿತ ಕೈಯಲ್ಲಿ ಹಿಡುದು ನಕ್ಕು ನಲಿದಾಡಿ ಜೀವನ ಸಾಗಿಸುತ್ತಿದ್ದಾರೆ. ನೀರು ಮೇಲಿನ ಗುಳ್ಳಿಯಂತೆ ಇರುವ ಇವರ ಜೀವನ ಆದರೂ ಇವರಿಗೆದೆ ಆತ್ಮಸ್ಥೈರ್ಯ, ಆತ್ಮಬಲ ಸದಾ ಇವರ ಜೊತೆ ಇದೆ. ಸಮುದಾಯ ಇವರ ಜೊತೆ ಇದೆ ಆದರೆ ಸಕರ್ಾರ ಇಲ್ಲ.
ಭಾರತದಲ್ಲಿಯೇ ಎಚ್.ಐ.ವ್ಹಿ ಸೋಂಕಿತರ ಪಟ್ಟಿಯಲ್ಲಿ 2 ನೇ ಸ್ಥಾನ ಪಡೆದಿರುವ ಬಾಗಲಕೋಟೆ ರಾಜ್ಯದ ಪಟ್ಟಿಯಲ್ಲಿ ಮುಧೋಳ ಹಾಗೂ ಜಮಖಂಡಿ ತಾಲೂಕು ಮೊದಲನೇ ಸ್ಥಾನದಲ್ಲಿವೆ. ಯಾರೋ ಮಾಡಿದ ತಪ್ಪಿಗೆ ಜೀವನದುದ್ದಕ್ಕೂ ನರಳುತ ಜೀವ ಸಾಗಿಸುತ್ತಿರುವವರು ಎಚ್.ಐ.ವ್ಹಿ ಸೋಂಕಿತರ ಮಕ್ಕಳು, ಪಾಲಕರು ಪಡುವ ಕ್ಷಣಿಕ ಸುಖಕ್ಕೆ ಬಲಿಯಾಗುವವರು ಅವರಿಗೆ ಹುಟ್ಟುವ ಮಕ್ಕಳು, ಆ ಮಕ್ಕಳಿಗೆ ಸೋಂಕು ತಗುಳಿ ಬಲಿಯಾದವರು ಸಾಕಷ್ಟು ಆದರೆ ಆ ಮಕ್ಕಳ ಆರೈಕೆಯೇ ನಮ್ಮ ಧ್ಯೇಯ ಎಂಬ ಹೆಮ್ಮೆಯ ಗುರಿಯನ್ನಿಟ್ಟುಕೊಂಡು ಜಮಖಂಡಿ ತಾಲೂಕಿನ ಮುತ್ತೂರು ಪುನರ್ವಸತಿ ಕೇಂದ್ರದಲ್ಲಿ ಒಂದು ಅತ್ಯುತ್ತಮ ಕಾರ್ಯ ನಡೆದಿದೆ.
ಬಿಜಾಪೂರಿನ ಉಜ್ವಲಾ ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆ ಎಚ್.ಐ.ವ್ಹಿ ಸೋಂಕಿತ ಮಕ್ಕಳಿಗೆ ತಾಯಿಯ ವಾತ್ಸಲ್ಯ ಹಾಗೂ ತಂದೆಯ ಪೋಷಣೆ ಎರಡು ನೀಡುತ್ತಿದೆ ಆದರೆ ಸಕರ್ಾರ ಈವರೆಗೂ ಇತ್ತ ಲಕ್ಷವಹಿಸಿಲ್ಲ. ಆದರೆ ಸಕರ್ಾರಿ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಇವರ ಬೆನ್ನಲುಬು ಎಂಬುದು ಮಾತ್ರ ಅಷ್ಟೆ ಸತ್ಯ. ಮಾಯೆಯ ಹಾಗೆ ಮನೆ ಬಾಗಿಲು ಬಡೆದು ಮನೆ ಸೇರಿಕೊಳ್ಳುವ ಈ ರೋಗ ಪ್ರಾರಂಭವಾಗುವ ಮೊದಲು ಕ್ಷಣಿಕ ಸುಖ ನೀಡಿದರೆ ಇಡೀ ಜೀವನ ನರಕಯಾತನೆ. ಆ ನರಕಯಾತನೆಗೆ ಬಲಿಯಾಗುವವದು ಕ್ಷಣಿಕ ಸುಖಪಟ್ಟವರು ಮಾತ್ರ ಅಲ್ಲ ಅವರಿಗೆ ಹುಟ್ಟುವ ಮಕ್ಕಳು ಕೂಡ. ಆ ನರಕಯಾತನೆಯಿಂದ ಮಕ್ಕಳನ್ನು ಹೊರ ತಂದು ಹೊಸ ಜಗತ್ತನ್ನು ಸೃಷ್ಠಿಸಿ ಎಲ್ಲರ ಜೊತೆ ಬೆರೆಯಲು, ಯಾರಿಗೂ ಕಮ್ಮಿ ಇಲ್ಲದ ಹಾಗೆ ಬೆಳೆಯುತ್ತಿರುವ ಮಕ್ಕಳು ಅತ್ಯಂತ ಪ್ರತಿಭಾವಂತರು.
ಇದು ನಮ್ಮ ಮಕ್ಕಳ ಧಾಮ, ನಮ್ಮ ಮಕ್ಕಳ ಧಾಮ ಎಚ್.ಐ.ವ್ಹಿ ಸೋಂಕಿತ ಮಕ್ಕಳ ಆಶ್ರಯ ತಾಣ ಮಾತ್ರ ಅಲ್ಲ ಅವರ ಬಾಳಿಗೆ ಒಂದು ಬೆಳಕು ನೀಡಿ ಪ್ರಜ್ವಲಿತ ಜ್ಯೋತಿಯಂತೆ ಬೆಳೆಸಿ ಉಜ್ವಲ ಭವಿಷ್ಯ ಕಲ್ಪಿಸಿಕೊಡಲು ಪ್ರಯತ್ನ ಮಾಡುತ್ತಿದೆ. ಬಿಜಾಪೂರ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ವಿವಿಧೆಡೆಯಿಂದ ಎಚ್.ಐ.ವ್ಹಿ ಸೋಂಕಿತ ಒಟ್ಟು 29 ಮಕ್ಕಳಿಗೆ ಇದು ಆಶ್ರಯ ಧಾಮವಾಗಿದೆ. 8 ಬಾಲಕಿಯರು, 21 ಬಾಲಕರು ಆಶ್ರಯ ಪಡೆಯುತ್ತಿರುವ ಈ ಧಾಮದಲ್ಲಿ ಅವರ ಆರೈಕೆ, ವಿದ್ಯಾಭ್ಯಾಸ, ನಿತ್ಯ  ಔಷಧೋಪಚಾರ, ಎಲ್ಲವೂ ನಡೆಯುತ್ತಿದೆ. ಈ ಮಕ್ಕಳು ಯಾರಿಗೂ ಕಮ್ಮಿ ಇಲ್ಲ, ಇವರಲ್ಲಿರುವ ಪ್ರತಿಭೆ ಸಾಮಾನ್ಯ ಮಕ್ಕಳಿಗಿಂತಲೂ ಒಂದು ಕೈ ಜಾಸ್ತಿ, ನಿತ್ಯ ಬೆಳಿಗ್ಗೆ ಎದ್ದು ಯೋಗ, ವ್ಯಾಯಾಮ ಮಾಡುವ ಈ ಮಕ್ಕಳು ತಿಂಡಿ ಮುಗಿಸಿಕೊಂಡು ಶಾಲೆಗೆ ತೆರಳುತ್ತಾರೆ, ಸಮೀಪದ ಆಳಬಾಳ ಗ್ರಾಮದ ಸಕರ್ಾರಿ ಶಾಲೆಯಲ್ಲಿ ಅಭ್ಯಸಿಸುತ್ತಿರುವ ಈ ಮಕ್ಳಳು ಓದಿನಲ್ಲಿ ಸದಾ ಮುಂದೆ ಇದ್ದಾರೆ. ಬೀದಿ ನಟಕಗಳನ್ನು ತಾವೇ ಸ್ವತಃ ರಚಿಸಿ ಅಭಿನಯಿಸಿದ್ದಾರೆ. "ನೀವೆಲ್ಲಾ ಇರುವಾಗ ನಾವೇಕೆ ಅನಾಥರು" ಎಂಬ ನಾಟಕ ಅತ್ಯಂತ ಕರುಣಾಜನಕವಾಗಿದ್ದು ಇವರ ಜೀವನ ನೈಜತೆಯನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಆಶ್ರಯ ಧಾಮದ ಸುತ್ತ ಜಾಲಿ ಬೆಳೆದಿದ್ದನ್ನು ಸ್ವತಃ ಸ್ವಚ್ಚುಗೊಳಿಸಿ ಕೈತೋಟ ನಿಮರ್ಿಸಿದ್ದಾರೆ, ನಿತ್ಯ ಬೇಕಾಗುವ ತರಕಾರಿಗಳನ್ನು ಅಲ್ಲಿಯೇ ಬೆಳೆಯುತ್ತಾರೆ. ತಾವೇ ಒಂದು ಸಮಿತಿಯನ್ನು ರಚಿಸಿಕೊಂಡು ಆ ಸಮಿತಿಯ ಮುಖಂಡ ಎಲ್ಲ ಮಕ್ಕಳು ಔಷಧಿ ತೆಗೆದುಕೊಳ್ಳುವ ನಂತರ ಅವನು ಸೇವಿಸುತ್ತಾನೆ, ವಾರಕ್ಕೊಮ್ಮೆ ಸಭೆ ನಡೆಸಿ ಆಗಿರುವ ಕಾರ್ಯಗಳು ಹಾಗೂ ಆಗಬೇಕಾದ ಕಾರ್ಯಗಳ ಬಗ್ಗೆ ಚಚರ್ಿಸುತ್ತಾರೆ, ಮಕ್ಕಳು ಇಷ್ಟಲ್ಲ ಮಾಡಬಲ್ಲರು ಎಂದ ಮೇಲೆ ಇವರು ಸಾಮಾನ್ಯರು ಎಂದು ಅನ್ನಿಸಲ್ಲ. ಆ ಸಮಿತಿಯ ಮುಖ್ಯಸ್ಥ ಈ ಮಕ್ಕಳಿಗೆಲ್ಲ ಆಪ್ತಮಿತ್ರನಂತೆ, ಆಪ್ತಮಿತ್ರ ಎನ್ನುವ ಒಂದು ಡಬ್ಬಿ ಇಟ್ಟು ಅದರಲ್ಲಿ ದೂರುಗಳನ್ನು ಬರೆದು ಹಾಕಲಾಗುತ್ತದೆ, ಆ ದೂರುಗಳನ್ನು ಸರಿಯಾಗಿ ಪರಿಶೀಲಿಸಿ ಮುಖ್ಯಸ್ಥ ಆ ಧಾಮದ ವ್ಯವಸ್ಥಾಪಕರಿಗೆ ಮನವರಿಕೆ ಮಾಡುತ್ತಾರೆ. ಇವರಲ್ಲಿರುವ ಪ್ರತಿಭೆ ಸಾಮಾನ್ಯವಾದದ್ದಲ್ಲ, ಬೀದಿ ನಾಟಕಗಳನ್ನು ರಚಿಸಿ ತಾವೇ ಸ್ವತಃ ಅಭಿನಯಿಸಿ ರಂಜಿಸಿಕೊಳ್ಳುತ್ತಾರೆ. ಬೀಡುವಿಲ್ಲದೆ ತಮ್ಮದೆ ಆದ ಕೆಲಸ ಕಾರ್ಯಗಳಲ್ಲಿ ಸದಾ ಮಗ್ನರಾಗಿರುವ ಈ ಮಕ್ಕಳಿಗೆ ಎಚ್.ಐ.ವ್ಹಿಯ ನೆನಪು ಸಹ ಇರೋದಿಲ್ಲ.
ಇಂತಹ ಮಕ್ಕಳಿಗೆ ಸಮುದಾಯ ಪಾಲನೆ ನೀಡುತ್ತಿದ್ದರೆ ಸಕರ್ಾರ ಇತ್ತ ಇನ್ನೂ ಲಕ್ಷವಹಿಸಿಲ್ಲ ಎನ್ನುವರು ಸುತ್ತ ಮುತ್ತಲಿನ ಗ್ರಾಮಸ್ಥರ ದೂರು. ಸಮೀಪದ ಆಳಬಾಳದ ಹಾಲು ಒಕ್ಕೂಟದವರು ವಾರಕ್ಕೆ 24 ಲೀ. ಹಾಲು ನೀಡುತ್ತಾರೆ, ಜಮಖಂಡಿ ಉಪವಿಭಾಗಾಧಿಕಾರಿ ಕ್ಯಾಪ್ಟನ ರಾಜೇಂದ್ರ ಇವರ ಗಾಡ್ ಪಾಧರ್ ಎನ್ನುವದರಲ್ಲಿ ಸಂಶಯವಿಲ್ಲ. ಇವರಿಗೆ ಎಲ್.ಪಿ. ಗ್ಯಾಸ, ಸ್ಟೋವ್, ಪಾತ್ರೆಗಳನ್ನು ಪ್ರಾರಂಭದ ಹಂತದಲ್ಲಿಯೇ ನೀಡಿದ್ದಾರೆ. ಇವರ ಜೊತೆ ಜಮಖಂಡಿ ತಹಶೀಲ್ದಾರ ಸಿದ್ದು ಕುಲ್ಲೋಳ್ಳಿ ಅವರೂ ಸಹ ಕೈ ಜೋಡಿಸಿದ್ದಾರೆ. ತಹಶೀಲ್ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಎಲ್ಲ ಸಿಬ್ಬಂದಿ ತಿಂಗಳಿಗೊಮ್ಮೆ ಒಂದು ದಿನದ ವೇತನವನ್ನು ಇಲ್ಲಿ ದೇಣಿಗೆಯಾಗಿ ನೀಡುತ್ತಾರೆ. ಒಟ್ಟು 47,500 ರೂ. ಈ ಆಶ್ರಯ ಧಾಮದ ಮಕ್ಕಳ ಆರೈಕೆಗೆ ನೀಡಲಾಗುತ್ತದೆ. ರೋಟರಿ ಸೇರಿದಂತೆ ಹಲವಾರು ಸೇವಾ ಸಂಸ್ಥೆಗಳ ಸದಾ ಇವರ ಸಹಾಯದಲ್ಲಿರುತ್ತವೆ. ಸುತ್ತಮುತ್ತಲಿನ ಗ್ರಾಮಸ್ಥರೂ ಇವರ ತಮ್ಮ ಮಕ್ಕಳಂತೆ ಆರೈಕೆ ನೀಡುತ್ತಾರೆ, ಡಾ.ಎಚ್.ಜಿ.ದಡ್ಡಿ, ಡಾ.ಉದಪುಡಿ ಈ ಮಕ್ಕಳಿಗೆ ಪುಕ್ಕಟೆಯಾಗಿ ಆರೈಕೆ ನೀಡುತ್ತಿದ್ದಾರೆ. ಜಮಖಂಡಿ ತಾಲೂಕಿನ ಗ್ರಾಮ ಆರೋಗ್ಯ ಸಮಿತಿಗಳ ಒಕ್ಕೂಟ ಒಂದು ಲಕ್ಷ ರೂ. ಸಹಾಯ ಧನ ನೀಡಿದೆ. ಈ ಆಶ್ರಮ ಧಾಮದ ಸಂಪೂರ್ಣ ಜವಾಬ್ದಾರಿ ಉಜ್ವಲಾ ಸಂಸ್ಥೆಯ ನಿದರ್ೇಶಕ ವಾಸುದೇವ ತೋಳಬಂದಿ ದಂಪತಿಗಳು ನಿರ್ವಹಿಸುತ್ತಿದ್ದಾರೆ. ಸದಾ ಈ ಮಕ್ಕಳ ಜೊತೆ ಬೆರೆಯುವ ವಾಸುದೇವ ಹಾಗೂ ಸುನಂದಾ ಅವರು ತಮ್ಮ ಮಕ್ಕಳಂತೆ ಆರೈಕೆ ನೀಡುತ್ತಿದ್ದಾರೆ.
ಒಟ್ಟು 6 ಜನ ಸಿಬ್ಬಂದಿಯುಳ್ಳ ಈ ಧಾಮಕ್ಕೆ ಸಕರ್ಾರ ಈ ವರೆಗೂ ಸಹಾಯಹಸ್ತ ತೋರಿಲ್ಲ, ಕನರ್ಾಟಕ ರಾಜ್ಯ ಏಡ್ಸ ನಿಯಂತ್ರಣ ಮಂಡಳಿ ಈ ಮಕ್ಳಳ ಸಹಾಯಕ್ಕೆ ಮುಂದೆ ಬರಬೇಕಾಗಿದೆ, ಈ ಧಾಮದ ಮಕ್ಕಳಿಗೆ ಎಷ್ಟೆ ಸಹಾಯ ಮಾಡಿದರೂ ಸಾಲದು, ಸ್ವಯಂ ಸೇವಾ ಸಂಸ್ಥೆಗಳು, ಅಧಿಕಾರಿಗಳಾಗಲಿ ಧನ ಸಹಾಯ ನೀಡಿದರೂ ಸಹ ಅದು ಕೇವಲ ಕೆಲವೇ ದಿನಗಳದ್ದೂ, ತಾತ್ಕಾಲಿಕ ಹಾಗೂ ತಕ್ಕಮಟ್ಟಿಗೆ ಸಹಾಯದೊರಕುತ್ತಿರುವ ಈ ಮಕ್ಕಳಿಗೆ ಶಾಶ್ವತವಾದ ಸಹಾಯಬೇಕಾಗಿದೆ, ಅದಕ್ಕೆ ಸಕರ್ಾರ ಮುಂದಾಗಬೇಕಾಗಿದೆ. ವಿಶ್ವ ಏಡ್ಸ ದಿನಾಚರಣೆಯಾದ ಇಂದು ಸಕರ್ಾರ ನಮಗೆ ಶಾಶ್ವತ ನೆರಳಾಗಬಹುದಾ ಎನ್ನುವ ಪ್ರಶ್ನೆ ಇಟ್ಟುಕೊಂಡು ಉತ್ತರಕ್ಕಾಗಿ ಜಾತಕಪಕ್ಷಿಯಂತೆ ಮಕ್ಕಳು ಕಾಯುತ್ತಿದ್ದಾರೆ.

ಭಾಸ್ಕರ ಮನಗೂಳಿ

1 comment:

  1. Good report boss. I wasn't known about this, really a good one.

    ReplyDelete