Tuesday, November 30, 2010

ಹಾಸ್ಟೆಲ್ ನರಕಯಾತನೆ

        






         ಬಾಗಲಕೋಟೆ ; ಒಂದು ಕೊಣೆಯಲ್ಲಿ 8 ಜನರ ವಾಸ, ಮಲಗಲು ಕಾಟ್ ಸಹ ಇಲ್ಲ, ನೀರಿಗೆ ಹಾಹಾಕಾರ, ಅಡುಗೆಗೆ ಕೊಳೆತ ತರಕಾರಿ, ತಿನ್ನಲು ಹೇಸಿಗೆ ಅನ್ನಿಸುವಂತಹ ತಿಂಡಿ, ಊಟದಲ್ಲಿ ಹುಳಗಳು..., ಇದೇನು ಅಂತೀರಾ..., ಇದು ವಿದ್ಯಾಥರ್ಿಗಳ ವಸತಿ ನಿಲಯದ ಸ್ಥಿತಿ. ವಿದ್ಯಾಥರ್ಿಗಳ ಗೋಳಿಗೆ ಕೇಳುವವರು ಇಲ್ಲ, ಅಧಿಕಾರಿಗಳಿಗೆ ಹೇಳುವವರು ಇಲ್ಲ.
ನವನಗರದ 45 ನೇ ಸೆಕ್ಟರ್ನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾದರಿ ಸಾರ್ವಜನಿಕ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಸಂಪೂರ್ಣವಾಗಿ ವಿದ್ಯಾಥರ್ಿಗಳ ಪಾಲಿಗೆ ನರಕವಾಗಿದೆ, ವಿದ್ಯಾಥರ್ಿಗಳ ಈ ನರಕ ಯಾತನೆಗೆ ಸ್ಪಂದಿಸುವವರು ಯಾರೂ ದಿಕ್ಕಿಲ್ಲ, ಅಲ್ಲಿಯ ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ವಿದ್ಯಾಥರ್ಿಗಳ ಓದಿನ ಜೊತೆಗೆ ಆರೋಗ್ಯದ ಬಗ್ಗೆ ಲಕ್ಷ ವಹಿಸುವವರು ಯಾರೂ ಇಲ್ಲ.
ಈ ವಸತಿ ನಿಲಯ 100 ವಿದ್ಯಾಥರ್ಿಗಳ ಅರ್ಹತೆಯುಳ್ಳದ್ದು, ಆದರೆ ಇಲ್ಲಿ ವಾಸಿಸಲು ಕೇವಲ 8 ಕೊಣೆಗಳು ಮಾತ್ರ, ಪ್ರತಿಯೊಂದು ಕೊಣೆಯಲ್ಲಿ 8 ಜನ ವಿದ್ಯಾಥರ್ಿಗಳು ವಾಸಿಸುತ್ತಿದ್ದಾರೆ. ಉಳಿದ 20 ವಿದ್ಯಾಥರ್ಿಗಳು ಕೇವಲ ಉಟಕ್ಕೆ ಮಾತ್ರ ಅಲ್ಲಿ ಬಂದು ವಸತಿ ಬೇರೆಡೆ ಮಾಡುತ್ತಿದ್ದಾರೆ. ಚಿಕ್ಕ ಚಿಕ್ಕ ಕೊಣೆಯಲ್ಲಿ 8 ವಿದ್ಯಾಥರ್ಿಗಳು ವಾಸಿಸುತ್ತಿದ್ದು ಸರಿಯಾಗಿ ಮಲಗಲು ಸಹ ಸಾಧ್ಯವಿಲ್ಲ, ಇನ್ನೂ ಓದುವದಂತೂ ಕನಸಿನ ಮಾತು.
45 ನೇ ಸೆಕ್ಟರ್ನಲ್ಲಿ ಇರುವ ಈ ವಸತಿ ನಿಲಯದ ಹತ್ತಿರ ಸರಿಯಾದ ಬಸ್ ನಿಲ್ದಾಣವೂ ಇಲ್ಲ, ಕಾಲೇಜ್ಗೆ ಹೋಗುವ ಸಮಯದಲ್ಲಿ ಬಸ್ ಇಲ್ಲ, ವಸತಿನಿಲಯದಿಂದ ಎರಡುವರೆ ಕಿಲೋಮಿಟರ್ ದೂರ ಚಲಿಸಿ ಅಲ್ಲಿಂದ ಬಸ್ ಹಿಡಿದು ಕಾಲೇಜ್ಗೆ ಹೋಗಬೇಕು. ನಿತ್ಯ ಬೆಳಿಗ್ಗೆ ಎದ್ದು ತಕ್ಷಣ ಮೊದಲ ಕೆಲಸ ಶೌಚಾಲಯಕ್ಕೆ ಪಾಳೆ ಹಚ್ಚೋದು, ನಂತರ ಸ್ನಾನ ಮಾಡಲು ಕ್ಯೂನಲ್ಲಿ ನಿಲ್ಲಬೇಕು, ಕೊನೆಯ ವಿದ್ಯಾಥರ್ಿ ಸ್ನಾನ ಮಾಡಿ ಬರೋದರಲ್ಲಿ ತಿಂಡಿಯ ಸಮಯ ಮುಗಿದಿರುತ್ತದೆ, ಸ್ವಲ್ಪ ತಡವಾದರೂ ತಿಂಡಿ ಇಲ್ಲ ಅಂತ ಬೆದರಿಸಿ ಕಳುಹಿಸುತ್ತಾರೆ, ಎಲ್ಲ ವಿದ್ಯಾಥರ್ಿಗಳ ತಯಾರಾಗುವಷ್ಟರಲ್ಲಿ ಸಮಯ 10 ಕ್ಕೆ ಬಂದು ನಿಂತಿರುತ್ತದೆ, ಎರಡುವರೆ ಕಿಲೋಮಿಟರ್ ಚಲಿಸಿ ಬಸ್ ಹಿಡಿದು ಕಾಲೇಜ ಮುಟ್ಟುವಷ್ಟರಲ್ಲಿ ಕಾಲೇಜಿನ ಅರ್ಧ ಸಮಯ ಮುಗಿದಿರುತ್ತದೆ.
ಇದು ಬೆಳಗಿನ ಕಷ್ಟವಾದರೆ ಇನ್ನೂ ರಾತ್ರಿ ಮಾಡುವ ಊಟ ಸಂಜೆ 7 ಗಂಟೆಯಿಂದ ಪ್ರಾರಂಭವಾಗಿ 8 ಗಂಟೆಗೆ ಪ್ರಾರಂಭಿಸಿ ಒಂದು ಗಂಟೆಯ ಅವಧಿಯ ನಂತರ ಬಂದ ವಿದ್ಯಾಥರ್ಿಗಳಿಗೆ ಊಟ ಇಲ್ಲವೇಇಲ್ಲ, ಸಿಬ್ಬಂದಿಗಳು ಮನೆಗೆ ಹೋಗುವ ಗಡಿಬಿಡಿಯಲ್ಲಿ ರಾತ್ರಿ ಮಾಡುವ ಊಟವನ್ನು ಸಂಜೆ 8 ಗಂಟೆಗೆ ಮುಗಿಸಿಬಿಡುತ್ತಾರೆ. ಇದು ನಿತ್ಯದ ತಂದರೆ.
ಇನ್ನೂ ಊಟ ಹಾಗೂ ತಿಂಡಿ ವಿಷಯದಲ್ಲಿ, ತನ್ನಲಸಾಧ್ಯವಾದ ತಿಂಡಿ, ಉಪ್ಪು ಖಾರವಿಲ್ಲದ ಊಟ, ಬಾಳಹುಳಗಳು ಇದರಲ್ಲಿ ರಾರಾಜಿಸುತ್ತಿರುತ್ತವೆ. ಇಂದು ಮಧ್ಯಾಹ್ನ ಈ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಊಟಕ್ಕೆ ಹುಗ್ಗಿ ತಯಾರಿಸಲಾಗಿತ್ತು. ಹುಗ್ಗಿಯಲ್ಲಿ ಬಾಳಹುಳುಗಳು ಕಂಡುಬಂದವು, ಇದನ್ನೆ ತಿಂದ ವಿದ್ಯಾಥರ್ಿಗಳು ನಮಗೆ ಇದು ರೂಢಿಯಾಗಿದೆ ಎಂದು ದುಖಃದಿಂದ ಹೇಳುತ್ತಾರೆ. ತರಕಾರಿಯಂತೂ ನೋಡಲು ಸಾಧ್ಯವಿಲ್ಲ, ಪ್ರಾಣಿಗಳು ಸಹ ಮುಟ್ಟದ ಈ ತರಕಾರಿಗಳನ್ನು ವಿದ್ಯಾಥರ್ಿಗಳು ಮಾಡುವ ಊಟ ತಯಾರಿಸಲು ಉಪಯೋಗಿಸುತ್ತಾರೆ. ಸ್ಟೋರ್ ರೂಂ ಪ್ರವೇಶಿಸುತ್ತಿರುವಂತೆ ಕೊಳೆತ ತರಕಾರಿಯ ಗಬ್ಬು ವಾಸನೆ, ಅಕ್ಕಿ, ಬೇಳೆಗಳನ್ನು, ಇಡ್ಲಿ ರವಾ ಸಹ ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ಚೀಲದಲ್ಲಿದ್ದ ಇಡ್ಲಿ ರವೆಯನ್ನು ಕೈ ಹಾಕಿ ಹೊರ ತಗೆದು ನೋಡಿದರೆ ಕೈ ತುಂಬ ನೂಸಿಗಳು ಹರಿದಾಡಿದವು. ಸ್ನಾನಕ್ಕೆ ಇಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ, ಕುಡಿಯುಲು ನೀರು ಕೇವಲ ಒಂದು ಡ್ರಮ್, ನೀರು ಖಾಲಿಯಾದರೆ ಕೆಲ ಸಮಯದಲ್ಲಿ ತುಂಬುವವರು ಗತಿ ಇರೋದಿಲ್ಲ.
ಇದನ್ನೆಲ್ಲ ಓದಿದ ನಿಮಗೆ ಇದು ನರಕ ಯಾತನೆ ಅನ್ನಿಸದೇ ಇರುತ್ತಾ...? ನಿತ್ಯ ಈ ವಿದ್ಯಾಥರ್ಿಗಳು ಈ ವಿಷಯಗಳ ಬಗ್ಗೆ ವಾರ್ಡನ್ ಅವರ ಗಮನ ಸೆಳೆಯುತ್ತಾರೆ, ತಿಂಗಳಿಗೊಮ್ಮೆ ಬರುವ ಅಧಿಕಾರಿಗಳ ಗಮನ ಕೂಡ ಸೆಳೆಯುತ್ತಾರೆ ಆದರೆ ಇದು ಅವರಿಗೆ ನರಕ ಯಾತನೆ ಅಂತ ಇನ್ನೂ ತಿಳಿದುಬಂದಿಲ್ಲ, ಇಲ್ಲದಿದ್ದರೆ ಇದನ್ನು ಸರಿಪಡಿಸುತ್ತಿದ್ದರೋ ಗೋತ್ತಿಲ್ಲ. ವಿದ್ಯಾಥರ್ಿಗಳು ಮೂಖ ಅಜರ್ಿಗಳನ್ನು ಸಹ ಅಧಿಕಾರಿಗಳಿಗೆ ಬರೆದಿದ್ದಾರೆ. ಆ ಪತ್ರದಲ್ಲಿ ವಿದ್ಯಾಥರ್ಿಗಳಿಗೆ ಸರಿಯಾಗಿ ಊಟ ನೀಡದೆ ಇರುವುದು ಸರಿಯಲ್ಲ, ನಮಗೂ ಕಾನೂನು ಗೊತ್ತು, ನಮಗೆ ನಮ್ಮದೆ ಆದ ಹಕ್ಕು ಇದೆ, ಲೋಕಾಯುಕ್ತ ಕೂಡ ಇದೆ ಎಂದೆಲ್ಲ ಬೆದರಿಕೆ ನೀಡಿದರೂ ಸಹ ಇದಕ್ಕೂ ಬಗ್ಗೆದ ಅಧಿಕಾರಿಗಳು ಈ ವರೆಗೂ ವಿದ್ಯಾಥರ್ಿಗಳ ಸಮಸ್ಯೆಗೆ ಸ್ಪಂದಿಸಿಲ್ಲ.
ಇಷ್ಟಕ್ಕೆ ಮುಗಿಲಿಲ್ಲ ಈ ಹಾಸ್ಟೇಲ್ ಅವಾಂತರ, ಈ ವಸತಿ ನಿಲಯದ ಕಟ್ಟಡ ನಗರಸಭೆಗೆ ಸಂಬಂಧ ಪಟ್ಟಿದ್ದು, ಅದೂ ಕೂಡ ಎಸ್.ಎಫ್.ಸಿ ಅನುದಾನದಡಿಯಲ್ಲಿ ಪರಿಶಿಷ್ಠ ಜಾತಿ-ಪರಿಶಿಷ್ಠ ಪಂಗಡದ ವಿದ್ಯಾಥರ್ಿಗಳ ವಸತಿ ನಿಲಯದ ಕಟ್ಟಡ, ಆ ಕಟ್ಟಡದಲ್ಲಿಯೇ ಬಿ.ಎಸ್.ಎಂ. ಹಾಸ್ಟೇಲ್. ಹಾಗಾದರೆ ಎಸ್.ಸಿ.-ಎಸ್.ಟಿ. ವಿದ್ಯಾಥರ್ಿಗಳಿಗೆ ವಸತಿ ನಿಲಯ  ಎಲ್ಲಿದೆ ಎನ್ನುವ ಪ್ರಶ್ನೆ ಕಾಡದೆ ಇರುತ್ತಾ...? ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಎಂದು ಪ್ರಶ್ನಿಸುವವರು ಯಾರೂ ಇಲ್ಲ. ಇದರತ್ತ ಗಮನವಹಿಸಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವವರು ಯಾರೂ ಇಲ್ಲ.
ವಿದ್ಯಾಥರ್ಿಗಳು ಮುಂದಿನ ಪ್ರಜ್ಞಾವಂತ ನಾಗರಿಕರು ಆಗಬೇಕು ಎಂದೆಲ್ಲ ಭಾಷಣ ಬಿಗಿಯುವ ಸಕರ್ಾರ ಇತ್ತ ಗಮನವಹಿಸಲಿ, ಈ ಸಮಸ್ಯೆಗೆ ಸ್ಪಂದಿಸಲಿ. ಸಂಬಂಧಪಟ್ಟವರಿಗೆ ಈ ಸಮಸ್ಯೆಗಳ ಗಮನ ಸೆಳೆದರೂ ಈ ವರೆಗೂ ಸ್ಪಂದಿಸಿಲ್ಲ. ಜಿಲ್ಲಾಧಿಕಾರಿಗಳೇ ಈ ಸಮಸ್ಯೆಗಳಿಗೆ ಮುಕ್ತಿ ಕಾಣಿಸಬೇಕಾಗಿದೆ.

ಭಾಸ್ಕರ ಮನಗೂಳಿ.  

No comments:

Post a Comment