Friday, December 3, 2010

ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಅಂಗವಿಕಲರ ಸಾಮೂಹಿಕ ವಿವಾಹ

           ಬಾಗಲಕೋಟೆ 3- ಒಬ್ಬರಿಗೆ ಕಾಲಿಲ್ಲ, ಇನ್ನೂ ಕೆಲವರು ಅಂಧರು, ಇನ್ನೂ ಕೆಲವರು ನಡೆಯಲು ಬಾರದವರು, ಇವರ ಕೈ ಹಿಡಿದವರು ಸಾಮಾನ್ಯರು. ಜಾತಿ ಬೇಧವಷ್ಟೆ ಅಲ್ಲ ಧರ್ಮ ಭೇಧವೂ ಇರಲಿಲ್ಲ, ಮಾನವೀಯತೆ ಮೌಲ್ಯ ಇಲ್ಲಿ ಎದ್ದು ಕಾಣುತ್ತಿತ್ತು. ವಿಶ್ವ ಅಂಗವಿಕಲ ದಿನಾಚರಣೆಯ ನಿಮಿತ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿನ ವೈಶಿಷ್ಠ್ಯ.
ಶಬರೀಶ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಸ್ಥೆ, ಇಳಕಲ್ನ ಆಶಾದೀಪ ಸಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ಸಾಮೂಹಿಕ ವಿವಾಹದಲ್ಲಿ ಸಾವಿವಾರು ಜನ ಆಗಮಿಸಿದ್ದರು. ಶ್ರೀಗಳ ಮಂತ್ರೋದ್ಘಾರ, ಮೌಲ್ವಿಗಳ ಉಪದೇಶದಡಿಯಲ್ಲಿ ನಡೆದ ಈ ಭಾವಪೂರ್ಣ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಅಂಗವಿಕಲರು, ವಧು ಅಂಗವಿಕಲೆಯಾದರೆ ವರ ಸಮಾನ್ಯ, ವರ ಅಂಗವಿಕಲೆಯಾದರೆ ವಧು ಸಾಮಾನ್ಯದವಳಾಗಿದ್ದಳು. ಆತ್ಮಬಲವನ್ನು ಜೊತೆಗಿಟ್ಟುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜಿಲ್ಲೆಯ ನಾನಾಭಾಗಳಿಂದ ಮಾತ್ರವಲ್ಲದೆ ಪಾವಗಡ, ಕೋಲಾರ ಮತ್ತಿರಡೆಗಳಿಂದ ಆಗಮಿಸಿದ್ದ ಜೋಡಿಗಳು ಈ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಷ್ಟ್ರ ಪ್ರಶಸ್ತಿ ವಿಜೇತ ವಿಕಲಚೇತನ ಘನಶ್ಯಾಂ ಭಾಂಡಗೆಯವರ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಇಳಕಲ್ ಗುರು ಮಹಾಂತ ಸ್ವಾಮಿಗಳು ಮಂತ್ರವನ್ನು ಉಪದೇಶಿಸಿದರು, ಸಂದರ್ಭಕ್ಕನುಸಾರವಾಗಿ ಅಶೋಕ ಕಲಬುಗರ್ಿ ವಚನಗಳನ್ನು ಸಾದರ ಪಡಿಸಿದರು.
ಮುಂಬೈ ಭಯೋತ್ಪಾದನೆಯಲ್ಲಿ ವೀರ ಮರಣಹೊಂದಿದ ಸಂದೀಪ ಉನ್ನಕೃಷ್ಣನ್ ತಂದೆ ಕೆ.ಉನ್ನಿಕೃಷ್ಣನ್, ತಾಯಿ ಧನಲಕ್ಷ್ಮೀಯವರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದ ವಿಶೇಷವಾಗಿತ್ತು. 14 ಅಂಗವಿಕಲ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸರ್ವ ಧಮರ್ಿಯರು ಪಾಲ್ಗೊಂಡಿದ್ದರು. ಭಾವೈಕ್ಯತೆಯ ಸಂದೇಶ ಸಾರಿದ ಸಾಮೂಹಿಕ ವಿವಾಹದಲ್ಲಿ 8 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಹುಲಿಯಪ್ಪ ಕುರಿ ಜೊತೆ ರೇಣುಕಾ ಮುತಗಣ್ಣವರ, ಶಿವಪುತ್ರಪ್ಪ ಬಾಗಿ ಜೊತೆ ಲಕ್ಷ್ಮೀ ಪೂಜಾರಿ, ರುದ್ರಪ್ಪ ಅಡಿವೆಪ್ಪ ಜೊತೆ ಮಂಜುಳಾ ಪೂಜಾರಿ, ದಾನಯ್ಯ ಕಾಂಬಳೆಮಠ ಜೊತೆ ಶಾಂತಾ ಹಿರೇಮಠ, ಮಂಜುನಾಥ ಕಂಬಾರ ಜೊತೆ ಸುಮಕ್ಕಾ ಕುರಿಯವರ, ಮಂಜುನಾಥ ಸಾವಕಾರ ಜೊತೆ ಮಹಾದೇವಿ ಗಾಣಿಗೇರ, ಮಲ್ಲಪ್ಪ ಜಿಕ್ಕಣ್ಣವರ ಜೊತೆ ಲಾಯವ್ವ ನಂದ್ಯಾಳ, ಈಶ್ವರ ಕಿತ್ತಲಿ ಜೊತೆ ಗಂಗಮ್ಮಾ ನವಲಗುಂದ, ಶ್ರೀಶೈಲ ಕೊಲ್ಕಾರ ಜೊತೆ ಲಕ್ಷ್ಮೀಬಾಯಿ ಹಿರೇಮಠ, ಕುಮಾರ ಜಾಧವ ಜೊತೆ ಸಂಗೀತಾ ಪವಾರ, ರಾಮಾಂಜನೇಯ ದೊಡ್ಡಕರಿಯಪ್ಪ ಜೊತೆ ಶ್ಯಾಮಲಾ ಎಂ.ಎಸ್., ಮಹ್ಮದರಫೀಕ ಮುದ್ದೇಬಿಹಾಳ ಜೊತೆ ಶಂಶದಾಬೇಗಂ ಸೋಲ್ಲಾಪೂರ, ಸೈದುಸಾಬ ಕೆರೂರ ಜೊತೆ ಸೈನಾಜಬೇಗಂ ಬುಡ್ಡೇಸಿ, ಯಮನೂರಪ್ಪ ತಳವಾರ ಜೊತೆ ಈರಮ್ಮ ದಿದ್ದಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಾಗಿದ್ದು ಶ್ರೀಗಳು, ಉನ್ನಿಕೃಷ್ಣನ್ ದಂಪತಿಗಳು, ಮಾಜಿ ಸಚಿವರು, ಗಣ್ಯರು ಸೇರಿದಂತೆ ಸಾವಿವಾರು ಜನರು ಆಶೀರ್ವದಿಸಿದರು.
ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಮಹಾಂತಸ್ವಾಮಿಗಳು ಅಧ್ಯಕ್ಷತೆ ವಹಿಸಿ ನವವಧುವರರಿಗೆ ಉಪದೇಶಿಸಿದರು. ಜೀವನದ ಸಾರವನ್ನು ಅಥರ್ೈಸಿಕೊಟ್ಟರು. ಚರಂತಿಮಠದ ಶ್ರೀ ಮ.ನಿ.ಪ್ರ ಪ್ರಭುಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿ ಎಂದು ಸಲಹೆ ನೀಡಿದರು. ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಶಿರೂರಿನ ಡಾ.ಬಸವಲಿಂಗ ಮಹಾಸ್ವಾಮಿಗಳು, ಭೋವಿ ಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಪ್ರಭುಲಿಂಗೇಶ್ವರ ಶುಗರ್ಸ ಅಧ್ಯಕ್ಷ ಜಗದೀಶ ಗುಡಗುಂಟಿ, ಮಾಜಿ ಸಚಿವ ಹುಲ್ಲಪ್ಪ ಮೇಟಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಶ್ರೀನಿವಾಸ ಬಳ್ಳಾರಿ, ವಿಜಾಪೂರದ ಎಂ.ಎಸ್.ಖೇಡ, ಡಾ.ಶ್ರೀಮತಿ ಅರುಣಾ ಅಕ್ಕಿ, ಶೀಮತಿ ಜಯಶ್ರೀ ಸಾಲಿಮಠ, ಎಸ್.ಎಸ್.ರೇಷ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ಎಸ್.ಎಚ್.ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಸಿದ್ದರಾಮ ಮನಹಳ್ಳಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ಉನ್ನಿಕೃಷ್ಣನ್ ಹಾಗೂ ಶ್ರೀಮತಿ ಧನಲಕ್ಷ್ಮೀ ಉನ್ನಿಕೃಷ್ಣನ್ ಈ ಸಮಾರಂಭದ ಕೇಂದ್ರ ಬಿಂದುಗಳಾಗಿದ್ದರೂ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಘನಶ್ಯಾಂ ಭಾಂಡಗೆ ಅವರು ಮಾಡುತ್ತಿರುವ ಕಾರ್ಯ ಅಭೂತಪೂರ್ವವಾದದ್ದು, ನವ ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಬಾಳಿ ತಮ್ಮ ಮನೆಯನ್ನು ಬೆಳಗಿರಿ ಎಂದು ಶುಭಹಾರೈಸಿದರು.
ಶಬರೀಶ ಅಂಗವಿಕಲ ಕ್ಷೇಮಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಘನಶ್ಯಾಂ ಭಾಂಡಗೆ, ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ದಿ ಸಂಸ್ಥೆ ಅಧ್ಯಕ್ಷ ರಘು ಹುಬ್ಬಳ್ಳಿ, ಈ ಸಮಾರಂಭದ ಸಂಚಾಲಕ ಅನಂತ ಧೋಂಗಡಿ, ಸಹ ಸಂಚಾಲಕಿ ಶ್ರೀಮತಿ ಸ್ಪೂತರ್ಿ ಭಟ್ ನೇತೃತ್ವ ವಹಿಸಿದ್ದರು. ಮಹೆಬೂಬ ತೊಣಶ್ಯಾಳ, ಸುರೇಶ ತುಳಗೇರಿ, ದ್ಯಾಮಣ್ಣ ಬೆಲ್ಲದಡಿ, ಸಂಗಮೇಶ ಭಾವಿಕಟ್ಟಿ ಇವರ ಕೈ ಜೋಡಿಸಿದ್ದರು.
ಒಟ್ಟಾರೆಯಾಗಿ ಅದ್ದೂರಿ ಸಮಾರಂಭದಲ್ಲಿ ಅಂಗವಿಕಲರ ದಿನಾಚರಣೆಯಂದು 14 ವಿಕಲಚೇತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾವಿರಾರು ಜನರು ಆಶೀರ್ವದಿಸಿದರು.

No comments:

Post a Comment