Sunday, December 5, 2010

ಮಕ್ಕಳ ಪ್ರತಿಭಾ ಪ್ರದರ್ಶನ ; ಅಂಧ ಕಲಾವಿದೆ ಕೃತಿಕಾ

                                                        ಅಂಧ ಕಲಾವಿದೆ ಕೃತಿಕಾ ಜಂಗಿನಮಠ.

                                                 ಶ್ರೀನಿಧಿ ವೀರಾಪೂರ ಅವರ ನವಿಲು ನೃತ್ಯದ ಭಂಗಿ.


                                 ಪುಟ್ಟ ಬಾಲಕ ನಚಿಕೇತ ದೊಡ್ಡಬಸವರಾಜ ಕೀ ಬೋರ್ಡ ವಾದನ ಮಾಡುತ್ತಿರುವದು.

 ಬಾಗಲಕೋಟೆ 5- ನವನಗರದ ಕಲಾಭವನ ಚಪ್ಪಾಳೆ ಸದ್ದಿನಿಂದ ಸಂಭ್ರಮಿಸಿತ್ತು, ಅಂಧ ಕಲಾವಿದೆಯ ಕೊಳಲು ವಾದನಕ್ಕೆ ತಲೆದೂಗಿಸಿ, ಕಲಾಸ್ವಾದನೆ ಮಾಡಿ ಚಪ್ಪಾಳೆಯ ಮೂಲಕ ಆಕೆಯ ಕಲೆಗೆ ಪ್ರೋತ್ಸಾಹ ನೀಡಿದ ಜನ ಕೊಳಲಿನ ನಿನಾದದ ಗುಂಗಿನಲ್ಲಿ ತೇಲಾಡಿದರು.
ಅಂಧ ಕಲಾವಿದೆ ವಿಜಾಪೂರದ ಪುಟ್ಟ ಬಾಲಕಿ ಕೃತಿಕಾ ಜಂಗಿನಮಠ ಅವರ ಕೊಳಲಿನ ನಿನಾದ ಆಸ್ವಾದಿಸಲು ಅನುವು ಮಾಡಿಕೊಟ್ಟವರು ಗದ್ದನಕೇರಿಯ ಶರಣ ನೂಲಿಚಂದಯ್ಯ ಶಿಕ್ಷಣ ಗ್ರಾಮೀಣಾಭಿವೃದ್ದಿ ಸಂಸ್ಥೆ. ಇದರ ಸಾರಥಿ ವಿಜಯಕುಮಾರ ಅವರ ತಂಡ ಈ ಬಾಲಕೀಯ ಕಲೆ ಪ್ರದಶರ್ಿಸಲು ಒಂದು ಅದ್ಭುತ ವೇದಿಕೆ ನಿಮರ್ಿಸಿ ಆ ವೇದಿಕೆಯಲ್ಲಿ ಪುಟ್ಟ ಪುಟಾಣಿಗಳ ಕಲಾ ಪ್ರತಿಭಾ ಪ್ರದರ್ಶನವೂ ಜರುಗಿತು.
ರಾಜ್ಯದ ವಿವಿಧೆಡೆಯಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಬಾಲಕಿ ಕೃತಿಕಾ ಅಂಧವಾಗಿದ್ದರೂ ಕಲಾ ದೃಷ್ಠಿ ಮಾತ್ರ ಅಗಾಧವಾದದ್ದು, ಜನರು ಆಕೆಯ ಕಲೆಯನ್ನು ಆಸ್ವಾದಿಸುವದನ್ನು ನೋಡದ ಈ ಬಾಲಕಿ ಜನರು ನೀಡುವ ಚಪ್ಪಾಳೆಯೇ ಈಕೆಗೆ ಪ್ರೋತ್ಸಹಾ. ಅಣ್ಣ ಕಾತರ್ಿಕ ಜಂಗಿನಮಠ ಈಕೆಗೆ ತಬಲಾ ಸಾಥ್ ನೀಡುತ್ತಾನೆ. ನೀ ತಂದ ಕಾಣಿಕೆ ಚಿತ್ರದ ಜೇನಿನ ಹೊಳೆಯೋ...,ಹಾಲಿನ ಮಳೆಯೋ..., ಶಿಶುನಾಳ ಶರೀಫರ ತರವಲ್ಲಾ ತಗೀ ನಿನ್ನ ತಂಬೂರಿ..., ಭೂಪ ರಾಗ ಸೇರಿದಂತೆ ಮತ್ತಿತರ ಚಿತ್ರ ಗೀತೆಗಳನ್ನು, ರಾಗಗಳನ್ನು ನುಡಿಸಿದ ಕೃತಿಕಾ ಅತ್ಯಂತ ಪ್ರತಿಭಾವಂತಳಾಗಿದ್ದಾಳೆ ಎನ್ನುವದು ನೆರೆದ ಜನ ಆಕೆಗೆ ನೀಡಿದ ಪ್ರೋತ್ಸಾಹ ದಿಂದ ತಿಳಿಯಬಹುದು. ಆಕೆಯ ಕಲೆಗೆ ಮೆಚ್ಚಿ ಕೆಲವರು ಗೌರವ ಕಣಿಕೆ ನೀಡಿದ್ದಾರೆ.
ಇನ್ನೂಳಿದಂತೆ ವಿಕಿ ಹಾಗೂ ತಂಡದವರು ಚಿತ್ರ ಗೀತೆಗಳನ್ನು ಸಾದರ ಪಡಿಸಿದರು, ಪುಟ್ಟ ಪುಟಾಣಿಗಳು ತಮ್ಮ ಪ್ರತಿಭೆಗಳನ್ನು ಸಹ ಸಾದರಪಡಿಸಿದರು. ಶ್ರೀನಿಧಿ ವೀರಾಪುರ ಎಂಬ ಪುಟ್ಟ ಬಾಲಕಿ ನವಿಲು ನೃತ್ಯ ಮಾಡಿ ಜನ ಮೆಚ್ಚುಗೆ ಪಡೆದಳು. ನಚಿಕೇತ ದೊಡ್ಡಬಸವರಾಜ ಅನಿಸುತಿದೆ ಯಾಕೋ ಇಂದು..., ಗೀತೆಗೆ ಕೀ ಬೋರ್ಡ ವಾದನ ಮಾಡಿ ಶಬ್ಬಾಸ್ಗೀರಿ ಪಡೆದರು.
ನಗರಸಭೆ ಅಧ್ಯಕ್ಷ ಶ್ರೀಮತಿ ಜ್ಯೋತಿ ಭಜಂತ್ರಿ ಸೇರಿದಂತೆ ಸೇರಿದ್ದ ಮಕ್ಕಳೆಲ್ಲ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಧ ಕಲಾವಿದೆ ಕೃತಿಕಾಳಿಗೆ ಶರಣ ನೂಲಿಚಂದಯ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಯೂರೋ ಕಿಡ್ಸ ಸೇರಿದಂತೆ ಹಲವಾರು ಸಂಸ್ಥೆಗಳು, ಗಣ್ಯರು ಕೃತಿಕಾಳಿಗೆ ಗೌರವ ಕಾಣಿಗೆ ಅಪರ್ಿಸಿದರು.

No comments:

Post a Comment