Sunday, December 12, 2010

ಚನೈನಲ್ಲಿ ನಡೆಯುವ ಅಂತರಾಷ್ಟ್ರೀಯ ಶ್ವಾನ ಪ್ರದರ್ಶನದಲ್ಲಿ ಮುಧೋಳ ನಾಯಿ

ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ಚನೈಗೆ ಹೊರಟ ಮುಧೋಳ ತಳಿ ನಾಯಿಗಳ ತಂಡಕ್ಕೆ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಹಾಗೂ ಇಲಾಖೆಯ ಅಧಿಕಾರಿಗಳು ಶುಭ ಕೋರಿದರು.

ಬಾಗಲಕೋಟೆ  ;  ಆದಿಲ್ ಶಾಹಿ ರಾಜ್ಯದ ರಾಜಧಾನಿ ಬಿಜಾಪೂರದ ಅಂದಿನ ಅವಿಭಾಜ್ಯ ಅಂಗವಾಗಿದ್ದ ಮುಧೋಳ ಪ್ರಾಂತ್ಯದ ಶ್ರೀಮಂತ ರಾಜ ಮಾಲೋಜಿರಾವ್ ಘೋರ್ಪಡೆ ಮತ್ತು ಲೆಫ್ಟಿನಂಟ್ ನಾನಾ ಸಾಹೇಬ ಚಂದನಶಿವಾ ಅವರು ಪೋಷಣೆಯಲ್ಲಿ ಅಭಿವೃದ್ದಿ ಹೊಂದಿದ ಮುಧೋಳ ತಳಿ ನಾಯಿ ಈಗ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದ್ದು ಡಿಸೆಂಬರ್ ದಿ.11 ಹಾಗೂ 12 ರಂದು ಚನೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ನಗರದಿಂದ ಇಂದು ತೆರಳಿದವು.
ಬೇಟೆ ಯಾಡಲು ಸುಪ್ರಸಿದ್ದವಾಗಿರುವ ಮುಧೋಳ ತಳಿ ನಾಯಿಗಳು ಅತ್ಯಂತ ಬಲಿಷ್ಠ ಸ್ನಾಯುಗಳನ್ನು ಹೊಂದಿದ್ದು ಓಟಕ್ಕೆ ಅನುಕೂಲವಾಗುವಂತೆ ಕಾಲುಗಳು ಮತ್ತು ದೇಹರಚನೆ ಇದ್ದು ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗುವ ಪೈಪೋಟಿ ಹೊಂದಿರುವ ಈ ನಾಯಿಗಳು ಅತ್ಯಂತ ಪ್ರಾಮಾಣಿಕ ಕಾವಲುಗಾರ ನಾಯಿಯಾಗಿದೆ. ಒಟ್ಟು 23 ಅತ್ಯುತ್ತಮ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಯೋಗ್ಯವುಳ್ಳ ನಾಯಿಗಳು ಬಾಗಲಕೋಟೆಯಿಂದ ತೆರಳಿದ್ದು 8 ಹೆಣ್ಣು ನಾಯಿ ಹಾಗೂ 15 ಗಂಟು ನಾಯಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.
ಡೊಂಕು ಬಾಲದ ನಾಯಿಗಳ ವಿರುದ್ದವಾಗಿ ಈ ನಾಯಿಗಳ ಬಾಲ ನೇರವಾಗಿ ಇರುತ್ತದೆ, ತನ್ನದೆ ಆದ ವೈಶಿಷ್ಠ್ಯತೆ ಹೊಂದಿರುವ ಈ ನಾಯಿ ತಳಿಗೆ ಅಂತರಾಷ್ಟ್ರೀಯ ಮಟ್ಟಕ್ಕೆ ಸೇರ್ಪಡೆಯಾಗಿರುವದು ಕನರ್ಾಟಕದ ಹೆಮ್ಮೆಯ ಪ್ರತೀಕವಾಗಿದೆ. ಇಂದು ಸ್ಥಳೀಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಈ ನಾಯಿ ತಳಿಯ ಸರ್ವತೋಮುಖ ಅಭಿವೃದ್ದಿಗೆ ಅನೇಕ ಯೋಜನೆಗಳನ್ನು ಸಹ ಹಾಕಿಕೊಂಡಿದ್ದು ಕನರ್ಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ಮುಧೋಳದ ತಿಮ್ಮಾಪೂರ ರಸ್ತೆಯಲ್ಲಿ ಶ್ವಾನ ಸಂಶೋಧನಾ ಕೇಂದ್ರವನ್ನು ಸಹ ಪ್ರಾರಂಭಿಸುತ್ತಿದೆ. ಸಕರ್ಾರ ಹಾಗೂ ವಿಶ್ವವಿದ್ಯಾಲಯಕ್ಕಿಂತ ಮುಖ್ಯವಾಗಿ ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಕುಟುಂಬ ಲೆಫ್ಟಿನೆಂಟ್ ಚಂದನಶಿವ ಕುಟುಂಬಕ್ಕೆ ಈ ನಾಯಿ ತಳಿ ಅಭಿವೃದ್ದಿ ಪಡಿಸುವದಕ್ಕಾಗಿ ಇನಾಮ ನೀಡಿದ್ದರು, ಇಂದಿಗೂ ಚಂದನಶಿವ ಕುಟುಂಬ ಈ ನಾಯಿ ತಳಿಯನ್ನು ಪೋಷಿಸಿ ಅಭಿವೃದ್ದಿ ಪಡಿಸುತ್ತಿದ್ದಾರೆ.
ಮುಧೋಳ ತಳಿ ನಾಯಿಯನ್ನು 1969 ರಲ್ಲಿಯೇ ಭಾರತ ರಾಷ್ಟ್ರೀಯ ಕೆನಲ್ ಕ್ಲಬ್ ನಿಂದ ಅಂಗೀಕ್ರತಗೊಂಡಿತ್ತು ಅಲ್ಲದೆ 1990 ರಲ್ಲಿ ಮೈಸೂರು ಕೆನಲ್ ಕ್ಲಬ್ ಈ ತಳಿಯ ನಾಯಿಗಳ ಪ್ರದರ್ಶನಕ್ಕಾಗಿ ಪ್ರಮುಖ ವೇದಿಕೆ ಕಲ್ಪಿಸಿಕೊಟ್ಟಿತ್ತು. ಸಧ್ಯ ಈ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿದೆ.
ಶ್ವಾನಗಳನ್ನು ಹಾಗೂ ಶ್ವಾನ ಮಾಲೀಕರನ್ನು ಬೀಳ್ಕೊಟ್ಟು ಈ ಸಂದರ್ಭದಲ್ಲಿ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಉಪನಿದರ್ೇಶಕ ಎಂ.ಎಸ್.ಪಾಳೇಗಾರ ಅಂತರಾಷ್ಟ್ರೀಯ ಮಟ್ಟದ ತಳಿಗಳಲ್ಲಿ ಸೇರ್ಪಡೆಯಾಗಿರುವ ಮುಧೋಲ ನಾಯಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು ಮುಧೋಳ ನಾಯಿ ತಳಿಗಳನ್ನು ಜಗತ್ತಿನಾದ್ಯಂತ ಪರಿಚಯಿಸಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದರು.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ರ ವಿರುದ್ದ ಪ್ರಪ್ರಥಮವಾಗಿ ಬಂಡಾಯ ಎದ್ದಿದ್ದ ಮುಧೋಳ ತಾಲೂಕಿನ ಹಲಗಲಿಯ ವೀರರಾದ ರಾಮ, ಬಾಲ, ಜಡಗಾ ಅವರ ಸಾತ್ ನೀಡಿದ ನಾಯಿ ತಳಿ ಸಧ್ಯ ಅಂತರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಚನೈಗೆ ತೆರಳಿವೆ. ಮುಧೋಳ ತಳಿ ನಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದುತ್ತಿರುವದು ಹೆಮ್ಮೆ ಸಂಗತಿ ಎಂದು ಸಾರ್ವಜನಿಕರು ಹರ್ಷದಿಂದ ಹೇಳುತ್ತಿದ್ದಾರೆ.

No comments:

Post a Comment