Tuesday, February 1, 2011

ಬಾಗಲಕೋಟೆಯ ಬೆಳುಕು ಪಂ.ಭೀಮಸೇನ ಜೋಶಿ


                 ಬಾಗಲಕೋಟೆಯ ಸಂಗೀತ ಕಲಾವಿದರೊಂದಿಗೆ ಪಂಡಿತ ಡಾ.ಭೀಮಸೇನ ಜೋಶಿ. ಗಾಯಕ ಅನಂತ ಕುಲಕಣರ್ಿ, ಕಲಾವಿದ ರಾವಸಾಹೇಬ ಮೋಹರೆ, ಕೇಶವ ಜೋಶಿ ಮತ್ತಿತರರು ಚಿತ್ರದಲ್ಲಿದ್ದಾರೆ.

            ಬಾಗಲಕೋಟೆಯ ಬೆಳುಕು ಪಂ.ಭೀಮಸೇನ ಜೋಶಿ

ಬಾಗಲಕೋಟೆ ; ಭಾರತ ರತ್ನ, ಗಾನ ಗಂಧರ್ವ, ಪದ್ಮಶ್ರೀ, ಪದ್ಮವಿಭೂಷಣೆ, ಸಂಗೀತ ಸಾರ್ವಭೌಮ, ಕನಾಟಕ ರತ್ನ ಹೀಗೆ 200 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾಗಿ ಸಂಗೀತ ಕ್ಷೇತ್ರದ ದಿಗ್ಗಜ, ಸ್ವರ ಸಾಮ್ರಾಟ, ಶೃತಿ, ಲಯ, ತಾಲದ ಅಧಿಪತಿಯಾಗಿದ್ದ ಡಾ.ಪಂಡಿತ ಭೀಮಸೇನ ಜೋಶಿ ಬಾಗಲಕೋಟೆಯ ಶಿಷ್ಯರು, ಅವರ ಜೈತ್ರ ಯಾತ್ರೆಗೆ ಮುನ್ನುಡಿ ಬರೆದಿದ್ದೆ ಬಾಗಲಕೋಟೆ, ಅವರ ಬಾಳಿನ ಪ್ರಮುಖ ಬದಲಾವಣೆಯಾಗಿದ್ದು ಸಹ ಬಾಗಲಕೋಟೆಯಲ್ಲಿ. ಹೀಗಾಗಿ ಅವರು ಬಾಗಲಕೋಟೆಯ ಬೆಳುಕು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಾಗಲಕೋಟೆಯ ಸಂಗಾತಿಗಳೆಲ್ಲ ತಮ್ಮ ಮಿತ್ರನನ್ನು ಕಳೆದುಕೊಂಡ ದುಖಃ ಎಲ್ಲ ಮನೆಯಲ್ಲಿಯೂ ಬೀಡು ಬಿಟ್ಟಿದೆ. ಪಂ. ಭೀಮಸೇನ ಜೋಶಿ ವಾಸಿಸುತ್ತಿದ್ದ ಮನೆಯ ಜಂತಿಯೂ ಸಹ ಕಂಬನಿ ಮಿಡಿಯುತ್ತಿದೆ, ಏಕಲವ್ಯ ಧ್ರೋಣಾಚಾರ್ಯರ ಮಧ್ಯೆ ಇದ್ದ ಗುರು-ಶಷ್ಯ ಸಂಬಂಧ ಬಾಗಲಕೋಟೆಯ ಕೆಲವು ಗಾಯಕರು ಪಂ.ಭೀಮಸೇನ ಜೋಶಿಯವರನ್ನು ಗುರು ಎಂದು ಭಾವಿಸುವವರೆಲ್ಲರೂ ಸೇರಿದಂತೆ ಬಾಗಲಕೋಟೆಯ ಅನೇಕ ಮನೆತನಗಳಲ್ಲಿಯೂ ಸಹ ದುಖಃ ಆವರಿಸಿದೆ.
ಪಂ.ಭೀಮಸೇನ ಜೋಶಿಯವರ ಬಾಲ್ಯಾವಸ್ಥೆಯಿಂದಲೇ ಬಾಗಲಕೋಟೆಗೆ ಅವರು ಚಿರಪರಿಚಿತರು, ಖ್ಯಾತ ಗಾಯಕರಾಗಿದ್ದ ಬಾಗಲಕೋಟೆಯ ಪಂ.ಶ್ಯಾಮಾಚಾರ್ಯ ಜೋಶಿ ಇವರ ಆಪ್ತ ಗುರುಗಳಲ್ಲಿ ಒಬ್ಬರಾಗಿದ್ದರು, ದಾಸ ಸಾಹಿತ್ಯದ ರಸದೌತನವನ್ನು ಪಂ.ಭೀಮಸೇನ ಜೋಶಿಯವರಿಗೆ ಉಣಬಡಿಸಿದವರು ಪಂ.ಶ್ಯಾಮಾಚಾರ್ಯ ಜೋಶಿ, ಅನೇಕ ಕಾರ್ಯಕ್ರಮಗಳಲ್ಲಿ ಸ್ವತಃ ಪಂ.ಭೀಮಸೇನ ಜೋಶಿಯವರು ಶಿರಶಾಷ್ಟಾಂಗ ನಮಾಸ್ಕಾರ ಹಾಕಿ ಕೃತಾರ್ಥ ಭಾವನೆಯನ್ನು ವ್ಯಕ್ತಪಡಿಸಿರುವ ನಿದರ್ಶನಗಳು ಇವೆ.
ಕನ್ನಡ ಶುಭೋದಯದ ಆಚಾರ್ಯರು ಎಂದೇ ಖ್ಯಾತರಾಗಿರುವ ಪಂ.ವಾಸುದೇವಾಚಾರ್ಯ ಕೆರೂರ ಅವರ ವಾಸುದೇವ ವಿನೋದಿನಿ ನಾಟ್ಯಸಭಾದ ಅತ್ಯಂತ ಜನಪ್ರೀಯ ನಾಟಕ "ನಲದಮಯಂತಿ" ನಾಟಕದಲ್ಲಿಯೂ ಸಹ ಇವರು ಪಾತ್ರವಹಿಸಿದ್ದರು. ಬಾಗಲಕೋಟೆ ಕಿಲ್ಲೆಯಲ್ಲಿರುವ ಶ್ರೀನಿವಾಸರಾವ್ ಪರ್ವತಿಕರ ಅವರ ಮನೆಯಲ್ಲಿಯೇ 3-4 ತಿಂಗಳಕಾಲ ವಾಸವಾಗಿದ್ದು ನಲದಮಯಂತಿ ನಾಟಕದ ರಂಗ ತಾಲೀಮು ಮಾಡಿ ಪಾಂಡುರಂಗ ಮಂಗಳವೇಡೆ, ಶ್ರೀನಿವಾಸರಾವ್ ಪರ್ವತಿಕರ, ನರಸಿಂಹಾಚಾರ್ಯ ಮಳಗಿ, ಶ್ರೀಮತಿ ಶಾಂತಾ ಪರ್ವತಿ, ಹೆಣ್ಣಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಬಿಂದುರಾವ್ ಕುಲಕಣರ್ಿ, ನಾರಾಯಣಾಚಾರ್ಯ ಡಂಬಳ, ಟಿ.ಎ.ದೇಶಪಾಂಡೆ(ಹುಲ್ಲಕೇರಿ ದೊರೆ) ಸೇರಿದಂತೆ ಹಲವರಿಗೆ ಪಂ.ಭೀಮಸೇನ ಜೋಶಿ ಕೈಜೋಡಿಸಿದ್ದರು. ಸಂಗೀತ ನಾಟಕವಾಗಿದ್ದ ನಳದಮಯಂತಿ ನಾಟಕದಲ್ಲಿ ಏಕಕಾಲಕ್ಕೆ 42 ಗೀತೆಗಳನ್ನು ಸಾದರಪಡಿಸಿದವರು ಪಂ.ಭೀಮಸೇನ ಜೋಶಿ, ಆಗಿನ ಸಮಯದಲ್ಲೂ ಸಹ ಇವರ ಗಾಯನದಲ್ಲಿರುವ ತಪ್ಪುಗಳನ್ನು ತಿದ್ದಿದವರು ಪಂ.ಶ್ಯಾಮಾಚಾರ್ಯ ಜೋಶಿ.
ನಗರದ ಈಗಿನ ಗುರುಸಿದ್ದೇಶ್ವರ ಟಾಕೀಸ್ ಆವರಣದಲ್ಲಿ ನಳದಮಯಂತಿ ನಾಟಕವನ್ನು ಪ್ರಪ್ರಥಮಬಾರಿಗೆ ಪ್ರದರ್ಶನಗೊಂಡಾಗ ಜನಸಾಗರ ಬಸವೇಶ್ವರ ವತರ್ುಲದವರೆಗೂ ಸೇರಿತ್ತು ಎಂದು ಅವರ ಒಡನಾಡಿಗಳು ಹೇಳುತ್ತಾರೆ, ಪಂ.ಭೀಮಸೇನ ಅವರ ಬಾಳಿನ ಜೈತ್ರಯಾತ್ರೆ ಪ್ರಾರಂಬವಾಗಿದ್ದು ಈ ಸಂದರ್ಭದಲ್ಲಿಯೇ ಎಂದು ಅವರ ಓಡನಾಡಿಗಳು ಹೆಮ್ಮೆಯಿಂದ ಹೇಳುಕೊಳ್ಳುತ್ತಾರೆ. ಅತ್ಯಂತ ತೇಜಸ್ಸಿನಿಂದ ಕೂಡಿದ್ದ ಅವರ ಮುಖದಲ್ಲಿ ಸಂತೋಷ ಯಾವಾಗಲೂ ಎದ್ದು ಕಾಣಿಸುತ್ತಿತ್ತು, ತುಂಟಾಟ ಅವರ ಹವ್ಯಾಸವಾಗಿತ್ತು, ನಳದಮಯಂತಿ ನಾಟಕದಲ್ಲಿ ಹೆಣ್ಣಿನ ಪಾತ್ರ ನಿರ್ವಹಿಸಿದ ಬಿಂದುರಾವ್ ಕುಲಕಣರ್ಿ ಅವರು ಹೆಣ್ಣೋ ಗಂಡೋ ಎಂದು ಸಭೀಕರು ಕೇಳಿದಾಗ, ಸಭೀಕರನ್ನು ಗ್ರೀನ್ ಕೋಣೆಗೆ ಕರೆದುಕೊಂಡು ಹೋಗಿ ಅವರ ಕುತೂಹಲವನ್ನು ತುಂಟತನದಿಂದ ಕೊನೆಗೊಳಿಸಿದರು ಎಂದು ಅಂದಿನ ಅವರ ಓಡನಾಡಿ ಇಂದಿಗೂ ವೈದ್ಯವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಎಂ.ಜಿ.ಕೊಪ್ಪ ಅವರ ಹೇಳುತ್ತಾರೆ.
ಪಂ.ಶ್ಯಾಮಾಚಾರ್ಯ ಜೋಶಿಯವರ ಶಿಷ್ಯರಾಗಿರುವ ಡಾ.ಎಂ.ಜಿ.ಕೊಪ್ಪ ಪಂ.ಭೀಮಸೇನ ಜೋಶಿಯವರ ಆಪ್ತ ಓಡನಾಡಿಗಳಾಗಿದ್ದರು, ಕೆಲ ಕಾರ್ಯಕ್ರಮಗಳಲ್ಲಿ ಪಂ.ಭೀಮಸೇನರ ಗಾಯನಕ್ಕೆ ಇವರು ಸಾಥ್ ನೀಡಿದ್ದಾರೆ, ಬರೋಡಾ, ಕಾನಪೂರ ಮತ್ತಿತರ ಪ್ರದೇಶಗಳಲ್ಲಿ ಪಂ.ಭೀಮಸೇನರ ಕಾರ್ಯಕ್ರಮಗಳನ್ನು ವೀಕ್ಷಿಸಲು ಹೋದಾಗ ಅವರನ್ನು ಗುರುತಿಸಿ  ಪ್ರವೇಶ ಪತ್ರ ನೀಡುವ ಪದ್ಧತಿ ಅವರದ್ದಾಗಿತ್ತು, ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕುತ್ತ ಮಾತನಾಡಿದ ಅವರು ಪಂ.ಭೀಮಸೇನರು ಭಾರತ ಸಂಗೀತ ಲೋಕದ ದಿಗ್ಗಜ, ಸಂಗೀತ ಕ್ಷೇತ್ರ ಶ್ರೀಮಂತವಾಗಿರುವುದಕ್ಕೆ ಪಂ.ಭೀಮಸೇನ ಜೋಶಿಯವರೇ ಕಾರಣ ಎಂದು ಹೇಳಿ ಬಾಗಲಕೋಟೆ ಅವರ ಜೈತ್ರ ಯಾತ್ರೆಯ ಮುನ್ನುಡಿಯಾಗಿತ್ತು, ಬಾಗಲಕೋಟೆಯಿಂದಲೇ ಅವರು ಪ್ರಸಿದ್ದಿ ಪಡೆದರು, ಅವರು ಉನ್ನತ ಸ್ಥಾನಕ್ಕೆ ಹೋದರೂ ಸಹ ಬಾಗಲಕೋಟೆಯನ್ನು ನೆನಪಿಸುತ್ತಿದ್ದರು ಎಂದು ಹೇಳುತ್ತಾರೆ. 1971 ರಲ್ಲಿ ಡಾ.ಜಿ.ಆರ್.ದಾತಾರ, ಸಿ.ಎನ್.ದೇಶಪಾಂಡೆ, ಪ್ರೊ.ಕೆ.ವ್ಹಿ.ಸುಬ್ಬರಾವ್ ಅವರ ನೇತೃತ್ವ ಕನರ್ಾಟಕ ಸಂಘ ಜೋಶಿಯವರ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ನಂತರ 1980, 94 ರವಧಿಯಲ್ಲಿ ಎರಡು ಬಾರಿ ಕಾರ್ಯಕ್ರಮಗಳು ನಡೆದಿವೆ, ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆತಾಗ ಅವರನ್ನು ನಗರಕ್ಕೆ ಬರಮಾಡಿಕೊಂಡು ಸನ್ಮಾನಿಸುವ ನ್ಯಾಯವಾದಿ ಅಚ್ಯುತ ಕೊಪ್ಪ ಅವರ ಅಲಾಪ್ ಸಂಸ್ಥೆಯ ಪ್ರಯತ್ನ ಫಲನೀಡದಿದ್ದಾಗ ಅವರ ಅನುಪಸ್ಥಿತಿಯಲ್ಲಿ ಪಂ.ಪ್ರವೀಣ ಗೋಡಖಿಂಡಿ ಅವರ ಸಂಗೀತ ಕಾರ್ಯಕ್ರಮವನ್ನು ಅಭಿನಂದನಾ ಕಾರ್ಯಕ್ರಮವನ್ನಾಗಿ ಅಪರ್ಿಸಲಾಯಿತು, ಪಟ್ಟದಕಲ್ಲು ಉತ್ಸವದ ಉದ್ಘಾಟನೆಯ ಪ್ರಯತ್ನ ಕೂಡ ನಡೆದಿತ್ತು, ಆದರೆ ಆರೋಗ್ಯ ಅವರಿಗೆ ಅನುಮತಿ ನೀಡಲಿಲ್ಲ, ಏನೇ ಆಗಲಿ ಬಾಗಲಕೋಟೆ ಪಂ.ಭೀಮಸೇನ ಜೋಶಿಯವರ ಬದುಕಿಗೆ ಮಹತ್ವದ ತಿರುವು ನೀಡಿತು ಎಂಬುದು ಅವರೇ ಒಪ್ಪುವ ಮಾತು.
ನಗರದಲ್ಲಿದ್ದ ಹಂಪಿಹೋಳೆ ಮನೆತನಕ್ಕೆ ಪಂ.ಭೀಮಸೇನ ಜೋಶಿಯವರ ತಮ್ಮನ್ನನ್ನು ದತ್ತು ನೀಡಿದ್ದು ಸಹ ಇತಿಹಾಸದಲ್ಲಿ ದಾಖಲಾಗಿದೆ, ಕಿಲ್ಲಾ ಭಾಗ ಪಂ.ಭೀಮಸೇನರ ಅತ್ಯಂತ ಒಡನಾಡಿ ಭಾಗವಾಗಿತ್ತು, ಅವರ ವಿಧಿವಶವಾಗುತ್ತಿದ್ದಂತೆ ಅವರು ವಾಸವಾಗಿದ್ದ ಈಗಿನ ಕೆ.ಎಸ್.ಪರ್ವತಿಕರ ಅವರ ಮನೆಯ ಜಂತಿಯೂ ಸಹ ಕಂಬನಿ ಮಿಡಿಯುತ್ತಿತ್ತು, ಅವರ ರಂಗ ತಾಲೀಮುಕ್ಕೆ ಸಾಕ್ಷಿ ನಮ್ಮ ಮನೆಯ ಜಂತಿಗಳೆಂದು ದುಖಃದಿಂದ ಹೇಳುತ್ತಾರೆ, ಮನೆಯ ಸದಸ್ಯನೋರ್ವನ್ನು ಕಳೆದುಕೊಂಡಂತೆ ದುಖಃದಲ್ಲಿರುವ ಕೆ.ಎಸ್.ಪರ್ವತಿ ಅವರ ಮನೆಯಲ್ಲಿ ಮೌನ ಮನೆಮಾಡಿದೆ.
ಕಿರಿಯ ಕಲಾವದರ ಮಾಡುವ ತಪ್ಪುಗಳನ್ನು ತಿದ್ದಿ ಅವರಿಗೆ ಸ್ಪೂತರ್ಿ ನೀಡುತ್ತಿದ್ದ ಪಂ.ಭೀಮಸೇನ ಜೋಶಿಯವರಿಗೆ ಪೂಣೆಯಲ್ಲಿ ಮಂತ್ರಾಲಯದ ಶ್ರೀ ಸುಶುಮೀಂದ್ರತೀರ್ಥ ಮಹಾಸ್ವಾಮಿಗಳು ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನನ್ನ ಕಾರ್ಯಕ್ರಮ ಆಯೋಜನೆಯಾಗಿತ್ತು, ಅವರ ಸಮ್ಮುಖದಲ್ಲಿಯೇ ನಾನು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ, ಕಾರ್ಯಕ್ರಮದ ನಂತರ ಪಂ.ಭೀಮಸೇನರನ್ನು ಭೇಟಿಯಾಗಿ ನಾನು ಬಾಗಲಕೋಟೆಯವನು ಎಂದು ಹೇಳಿದಾಗ ಅವರ ಸಂತೋಷ ಮುಗಿಲುಮುಟ್ಟಿತ್ತು, ನೀನೊಬ್ಬ ಒಳ್ಳೆಯ ಗಾಯಕ ಎಂದು ಪ್ರಶಂಶಿಸಿ ನನಗೆ ಸ್ಪೂತರ್ಿ ನೀಡಿದ್ದರೂ ಎಂದು ಅಳುತ್ತ ಹೇಳುತ್ತಾರೆ ಖ್ಯಾತ ಗಾಯಕ ನಗರದ ಅನಂತ ಕುಲಕಣರ್ಿಯವರು.

ಭಾಸ್ಕರ ಮನಗೂಳಿ

No comments:

Post a Comment