Thursday, February 10, 2011

ಕಾಗರ್ಿಲ್ ರಣರಂಗದಲ್ಲಿ ಕೈ ಕಾಳು ಕಳೆದುಕೊಂಡ ರಂಗಪ್ಪ


ರಂಗಪ್ಪ ಅಂದು.                                                                                                               
   ಕಾಗರ್ಿಲ್ ರಣರಂಗದಲ್ಲಿ ಕೈ ಕಾಳು ಕಳೆದುಕೊಂಡ ರಂಗಪ್ಪ


ದೇಶವನ್ನು ಪ್ರೀತಿಸುವ ಗೌರವಿಸುವ ರಕ್ಷಿಸುವ ಜನರು ಭಾರತದಲ್ಲಿ ಮಾತ್ರ ಸಿಗುತ್ತಾರೆ, ಇದು ಪ್ರಥಮ ಸ್ವಾತಂತ್ರ ಸಂಗ್ರಾಮದಿಂದಲು ನಾವು ಕಾಣಬಹುದು. 1857 ರಲ್ಲಿ ನಡೆದ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಇದೇ ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರಾದ ವೀರ ಜಡಗಾ, ಬಾಲ, ರಾಮರಂಥಹ ಅನೇಕ ವೀರರು ಆಂಗ್ಲರ ವಿರುದ್ದ ಬಂಡಾಯ ಎದ್ದು ದೇಶದ ರಕ್ಷಣೆಗೆ ಪಣತೊಟ್ಟು ನಿಂತಿದ್ದರು, ಮುಂದೆ ವಿನಾಯಕ ದಾಮೋಧರ ಸಾವರಕರ ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಅಂದಮಾನ ನಿಕೋಬಾರ್ ಜೈಲನಲ್ಲಿ ಕಾಲಾ ಪಾಣಿ ಶಿಕ್ಷೆ ಅನುಭವಿಸಿದ್ದಂತು ನೆನಿಸಿಕೊಂಡರೆ ದೇಶ ದ್ರೋಹಿಗಳ ಎದೆಶೀಳುವಂತೆ ರೋಷಬರುತ್ತೆ, ಪಂಡಿತ ಚಂದ್ರಶೇಖರ ಆಜಾದರಿಗೆ ಆಂಗ್ಲರು ಬೆನ್ನಟ್ಟಿ ಗುಂಡು ಹಾರಿಸಲು ಬಂದಾಗ ಅವರ ಸಾವು ಕೂಡಾ ಆಂಗ್ಲ ಪಾಪಿಗಳಿಂದಾಗಬಾರದು ಎಂಬ ಒಂದೇ ಕಾರಣಕ್ಕೆ ತಮ್ಮ ಕಾಡತೋಸಿನಿಂದಲೇ ಸ್ವತಃ ತಾವೇ ತಲೆಗೆ ಗುಂಡು ಹಾರಿಸಿಕೊಂಡು ಆಜಾದರಾಗಿಯೇ ಭಾರತ ಮಾತೆಗೆ ಪ್ರಾಣಾರ್ಪಣೆ ಮಾಡಿದರು.
ಸ್ವತಂತ್ರ ಸಂಗ್ರಾಮದ ಘಳಿಗೆಯನ್ನು ನೆನೆಯುತ್ತ ಹೋದರೆ ಹೋರಾಟಗಾರ ಪಟ್ಟಿಯೇ ಕಣ್ಮುಂದೆ ಬರುತ್ತದೆ, ಹೀಗೆ ಅಲ್ಲಿಂದ ಇಲ್ಲಿಯವರೆಗೂ ಪ್ರತಿಯೊಬ್ಬ ಮೂಲ ಭಾರತೀಯ ದೇಶವನ್ನು ರಕ್ಷಿಸುತ್ತ ಗೌರವಿಸುತ್ತ ಬಂದಿದ್ದಾನೆ. ಇಂದಿಗೂ ದೇಶವನ್ನು ರಕ್ಷಿಸುವದಕ್ಕಾಗಿ ಮನೆ ಮಠಗಳನ್ನು ಬಿಟ್ಟು ತಮನ್ನು ತಾವೇ ಸ್ವಇಚ್ಚೆಯಿಂದ ದೇಶದ ಹಿತಕ್ಕಾಗಿ ಪೂಣರ್ಾವಧಿ ಕೆಲಸ ಮಾಡುವವರನ್ನು, ಗಡಿ ಭಾಗದಲ್ಲಿ ನಿಂತೂ ಪ್ರಾಣಕ್ಕೂ ಹೆದರದೆ ಜೀವನದ ಎಲ್ಲ ಆಸೆಗಳನ್ನು ಬಿಟ್ಟ ವೀರ ಯೋಧರನ್ನು ನಾವು ನೋಡಬಹುದು ಆದರೆ ಇವರಿಗೆ ಸರಕಾರದಿಂದ ಯಾವುದೇ ಸವಲತ್ತು ಸಿಗುವುದಿಲ್ಲ ಎನ್ನುವುದು ಮಾತ್ರ ಅಷ್ಠೆ ಸತ್ಯ.
1999 ರಲ್ಲಿ ನಡೆದ ಕಾಗರ್ಿಲ್ ಯುದ್ದ, ಸಾವಿರಾರು ಉಗ್ರರು ವಶಪಡಿಸಿಕೊಂಡಿದ್ದ ಟೈಗರ್ ಪರ್ವತ, ಲಢಾಕ್, ಕಾಗರ್ಿಲ್ನ್ನು ಪ್ರಾಣದ ಹಂಗ ತೊರೆದು ಭಾರತದ ಸೈನಿಕರು ಮುನ್ನುಗ್ಗಿ ಅದನ್ನು ಉಗ್ರಗಾಮಿಗಳಿಂದ ಬಿಡಿಸಿಕೊಂಡಿದ್ದರು, ಈ ಯುದ್ದದಲ್ಲಿ  ಭಾರತ ಅನೇಕ ವೀರ ಯೋಧರನ್ನು ಕಳೆದುಕೊಂಡಿತು ಅಷ್ಠೆ ಅಲ್ಲ ಅನೇಕರಿಗೆ ವಿಕಲಾಂಗರನ್ನಾಗಿ ಮಾಡಿತು, ಅವರ ತ್ಯಾಗ ದೇಶದ ಮತ್ತು ನಮ್ಮೆಲ್ಲರ ರಕ್ಷಣೆ ಒಂದೇ ಗುರಿಯಾಗಿತ್ತು, ಈ ಯುದ್ದದಲ್ಲಿ ಬಾಗಲಕೋಟೆ ಜಿಲ್ಲೆಯ ಅನೇಕ ಸೈನಿಕರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅಪರ್ಿಸಿದ್ದಾರೆ, ವಿಕಲಾಂಗರು ಆಗಿದ್ದಾರೆ ಅಂತವರಲ್ಲಿ ಜಿಲ್ಲೆಯ ಬದಾಮಿ ತಾಲೂಕಿನ ಹುಲಸಗೇರಿ ಗ್ರಾಮದ ರಂಗಪ್ಪ ಹುಲಿಯಪ್ಪ ಆಲೂರ ಕೂಡಾ ಒಬ್ಬರು.
ಈ ಯೋಧ 1999 ರಲ್ಲಿ ಕಾಗರ್ಿಲ್ ಯುದ್ದದಲ್ಲಿ ಪಾಲ್ಗೊಂಡು ತನ್ನ ಎರಡು ಕೈಗಳನ್ನು ಒಂದು ಕಾಲನ್ನು ಕಳೆದುಕೊಂಡು ಭಾರತದ ರಕ್ಷಣೆ ಹೋರಾಡಿದ ವೀರ. 1993 ರಲ್ಲಿ ಬೆಳಗಾವಿಯ ಎಂ.ಎಲ್.ಐ.ಆರ್.ಸಿ ಮರಾಠ ಲೈಟ ಇನ್ಫೇಂಟ್ರಿ ರೆಜಿಮೆಂಟ ಸೆಂಟರ್ಸನಲ್ಲಿ ಇಡಿಯನ್ ಆಮರ್ಿಗೆ ಸೇರಿಕೊಂಡ, 3 ವರ್ಷದ ತರಬೇತಿ ಅವಧಿಯನ್ನು ಪೂರ್ಣಗೊಳಿಸಿದ ನಂತರ ಈತನನ್ನು ಗುಜರಾತ ರಾಜ್ಯದ ಅಹ್ಮದಾಬಾದಗೆ ವಗರ್ಾಯಿಸಲಾಯಿತು, ಅಲ್ಲಿ 2 ವರ್ಷಗಳ ಸೇವೆಯ ನಂತರ ಅಸ್ಸಾಂ ರಾಜ್ಯದಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು, ನಂತರ ಇವರಿಗೆ ವರ್ಗವಾಗಿದ್ದು ಭಾರತ ಮಾತೆಯ ಮುಕುಟ ಜಮ್ಮು ಮತ್ತು ಕಾಶ್ಮೀರಕ್ಕೆ, ಕಾಗರ್ಿಲ್ ಯುದ್ದದ ಸಮಯ, ಅತ್ತ ಪಾಕಿಸ್ತಾನಿ ಉಗ್ರರು ದಾಳಿ ಮಾಡುತ್ತಲೆ ಇದ್ದರು, ಇವರು ಲೇಹ ಲಢಾಕ್ ಸಿಯಾಚಿನ್ ಗ್ಲೆಸಿಯರನ್ ಕಾಗರ್ಿಲ್ದಲ್ಲಿ ಯುದ್ದ ಕಾರ್ಯಾಚರಣೆಯಲ್ಲಿ ತೊಡಗಿದ್ದರು, ಏಕಾಏಕಿ ಪಾಕಿಸ್ತಾನಿ ಉಗ್ರರು ಮೀಜಾಯಿಲ್ ಬಾಂಬ್ ದಾಳಿ ನಡೆಸಿದ್ದರು, ಬಾಂಬ್ ದಾಳಿ ಮಾಡಿದ ಸ್ಥಳದಲ್ಲಿ ಇವರೊಡನೆ ಏಳು ಜನ ಸೈನಿಕರು ಮಾತ್ರ ಇದ್ದರು, ಇವರೊಡನೆ ಇದ್ದ ಏಳು ಜನ ವೀರ ಮರಣಹೊಂದಿದರು, ಇವರು ಕೂಡಾ ಉಳಿಯಲಾಗದಂತಹ ಸ್ಥಿತಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು, 48 ಗಂಟೆಗಳ ನಂತರ ಭಾರತ ಸರಕಾರ ವೀರ ಮರಣಹೊಂದಿದವರ ಶವಗಳನ್ನು ತಮ್ಮ ತಮ್ಮ ಉರಿಗೆ ಸಾಗಿಸಲು ಸೈನಿಕರು ಬಂದಾಗ ರಂಗಪ್ಪ ರಂಗಪ್ಪ ಎಂದು ಸಹ ಸೈನಿಕರು ಕರೆದಾಗ ಇವರಿಗೆ ಎಚ್ಚರವಾಯಿತು, ನಾನಿನ್ನು ಬದುಕಿದ್ದೇನೆ ಸರ್ ಎಂದು ಕೂಗಿದ ತಕ್ಷಣವೇ ಶವ ಸಾಗಿಸಲು ಆಗಮಿಸಿದ್ದ ಸೈನಿಕರು ಸರಕಾರಕ್ಕೆ ಮಾಹಿತಿಕೊಟ್ಟು ಹೆಲಿಕಾಪ್ಟರ್ ಮುಖಾಂತರ ಅವರನ್ನು ಪಠಾನ್ಕೂಟ್ ಆಸ್ಪತ್ರೆಗೆ ದಾಖಲಿಸಲಾಯಿತು, ಅದು ಚಿಕ್ಕ ಆಸ್ಪತ್ರೆಯಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಅಲ್ಲಿಂದ ಪಂಜಾಬ್ನ ಚಂಡಿಗಡ ಆಸ್ಪತ್ರೆಗೆ ದಾಖಲಿಸಲಾಯಿತು, ತೀವ್ರವಾಗಿ ಗಾಯಗೊಂಡಿದ್ದ ಇವರ ಎರಡು ಕೈಗಳನ್ನು ಒಂದು ಕಾಲನ್ನು ಅನಿವಾರ್ಯವಾಗಿ ಕತ್ತರಿಸಲಾಯಿತು, ಒಂದು ವರ್ಷ ಆಸ್ಪತ್ರಯಲ್ಲೆ ಕಳೆಯಬೇಕಾಯಿತು. ಇಷ್ಠೆಲ್ಲಾ ಆದರೂ ರಂಗಪ್ಪ ಇಂದಿಗೂ ದೇಶದ ರಕ್ಷಣೆಯಲ್ಲಿ ತಮ್ಮ ಪಾತ್ರ ನೆನೆಸಿಕೊಂಡು ದೇಶದ ರಕ್ಷಣೆಯಲ್ಲಿ ಇಂತಹ ಅವಕಾಶ ಯಾರಿಗೆ ಸಿಗುತ್ತೆ ಹೇಳಿ ಎಂದು ಹೆಮ್ಮೆ ಪಡುತ್ತಾರೆ ಅಷ್ಠೆ ದುಖಃನು ಪಡುತ್ತಾರೆ, ದೇಶಕ್ಕಾಗಿ ಪ್ರಾಣದ ಹಂಗನ್ನು ತೊರೆದು ವೈರಿಗಳ ಸೆದೆಬಡಿಯಲು ಮುಂದಾದಾಗ ಬಾಂಬ್ ದಾಳಿಯಿಂದ ಎರಡು ಕೈಗಳನ್ನು, ಒಂದು ಕಾಲನ್ನು ಕಳೆದುಕೊಂಡಿದ್ದು ಈ ದೇಶದ ಆಗಿನ ಪ್ರಧಾನ ಮಂತ್ರಿಗೂ ಗೊತ್ತು ಎಲ್ಲರಿಗೂ ಗೊತ್ತು ಆದರೂ ಸರಕಾರ ಏನು ಸಹಾಯ ಮಾಡಿಲ್ಲ ಎಂದ ವಿಷಾದದಿಂದ ಹೇಳುತ್ತಾರೆ.
ರಂಗಪ್ಪ ಜನಿಸಿದ್ದು 1974ರಲ್ಲಿ, ಪಿ.ಯು.ಸಿ ದ್ವಿತೀಯ ವರೆಗೆ ಶಿಕ್ಷಣ ಮುಗಿಸಿದ ಇವರಿಗೆ 2 ತಮ್ಮಂದಿರು, ಒಬ್ಬಳೇ ತಂಗಿ. ತಮ್ಮ ಹುಟ್ಟಿನಿಂದಲೂ ಕಿವುಡ ಮತ್ತು ಮೂಖ, ಸಹೋದರಿಗೆ ಮದುವೆಯಾಗಿದೆ, ತಂದೆ ತೀರಿಕೊಂಡು ಒಂದು ವರ್ಷವಾಯಿತು, ತಾಯಿಯೊಂದಿಗೆ ದಿನಗಳನ್ನು ಸಾಗಿಸಿತ್ತಿರುವ ಇವರ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ.
ಯುದ್ದದಲ್ಲಿ ಎರಡು ಕೈಗಳನ್ನು, ಒಂದು ಕಾಲನ್ನು ಕಳೆದುಕೊಂಡು ಇವರು ಸಂಪೂರ್ಣ ವಿಕಲಾಂಗರು, ಚಿಕಿತ್ಸೆಯ ನಂತರ ಸ್ವಗ್ರಾಮಕ್ಕೆ ಆಗಮಿಸಿದ ಇವರು ಉದ್ಯೋಗಾವಕಾಶಕ್ಕೆ ಅನೇಕ ಅಜರ್ಿಗಳನ್ನು ಹಾಕಿದರು ಯಾವುದೇ ಫಲಶೃತಿ ಇಲ್ಲ, ಎಸ್.ಟಿ.ಡಿ, ಝರಾಕ್ಸ, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ, ಬಾರ್ ಅಂಗಡಿ ಲೈಸನ್ಸಗೋಸ್ಕರ, ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳಿಗೆ ಅಜರ್ಿ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಸರಕಾರಿ ಅಥವಾ ಸಂಸ್ಥೆಗಳ ಸೌಲಭ್ಯ ದೊರೆತಿಲ್ಲ ಎಂದು ಕಣ್ಣೀರಿಡುತ್ತ ಹೇಳುತ್ತಾರೆ.
ಇದು ದೇಶದ ರಕ್ಷಣೆಗಾಗಿ ವಿಕಲಾಂಗರಾದ ವೀರ ಸೈನಿಕ ರಂಗಪ್ಪ ಅವರ ಕಥೆ ವ್ಯಥೆ, ಸರಕಾರ ಸೈನಿಕರ ಮೇಲೆ ಇಟ್ಟಿರುವ ನಿಷ್ಕಾಳಜಿ ಎತ್ತಿ ತೊರಿಸುತ್ತೆ, ಸರಕಾರ ಅಂತೂ ಮುಂದೆ ಬರಲ್ಲ ಅಂತಾ ಅವರು ಕೈಬಿಟ್ಟು ಸುಮ್ಮನಾಗಿ ಬಿಟ್ಟಿದ್ದರು, ಇಂತಹ ಸಂದರ್ಭದಲ್ಲಿ ಇವರ ಸುದ್ದಿ ತಿಳಿದ ತಕ್ಷಣ ಸ್ಪಂದಿಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ "ಸೇವಾ ಭಾರತಿ", ಸದಾ ಭಾರತದ ಸೇವೆಯಲ್ಲೆ ತನ್ನನ್ನು ತಾನು ತನ್ನದೇ ಆದ ರೀತಿಯಲ್ಲಿ ತೊಡಗಿಸಿಕೊಂಡಿರುವ ಈ ಸೇವಾ ಭಾರತಿ ಸಂಸ್ಥೆ ಈ ವೀರ ಯೋಧನಿಗೆ ಒಂದು ಲಕ್ಷ ರೂ.ಗಳ ಸಹಾಯಾರ್ಥ ಧನದ ಜೊತೆಗೆ ಇಂದು ಸನ್ಮಾನಿಸಲಾಗುತ್ತಿದೆ, ಇದು ಪ್ರತಿಯಬ್ಬ ವೀರ ಯೋಧನಿಗೆ ಸಿಗಬೇಕಾದ ಗೌರವ, ಸೇವಾ ಭಾರತಿ ಸಂಸ್ಥೆ ಮುಂದೆ ಬಂದಹಾಗೆ ಸರಕಾರ ಹಾಗೂ ನಿವೂ ಮುಂದೆ ಬರಬಹುದಲ್ಲವೇ....?


ಭಾಸ್ಕರ ಮನಗೂಳಿ.

No comments:

Post a Comment